Tuesday, July 28, 2026
spot_imgspot_img
spot_imgspot_img

ವಿಟ್ಲದ ಶಿಕ್ಷಕಿ-ಸಾಹಿತಿ ವಿ. ಸೀತಾಲಕ್ಷ್ಮಿ ವರ್ಮ ಅವರಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ದತ್ತಿ ಬಹುಮಾನ

- Advertisement -
- Advertisement -

ವಿಟ್ಲ: ಕನ್ನಡ ಪುಸ್ತಕ ಪ್ರಾಧಿಕಾರದ 2025ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಇದೇ ಮೊದಲ ಬಾರಿಗೆ ಘೋಷಿಸಲಾದ ದತ್ತಿ ಬಹುಮಾನಗಳಲ್ಲಿ ವಿಟ್ಲ ಅರಮನೆಯ ಶಿಕ್ಷಕಿ ಹಾಗೂ ಸಾಹಿತಿ ವಿ. ಸೀತಾಲಕ್ಷ್ಮಿ ವರ್ಮ ಅವರು ಆಯ್ಕೆಯಾಗಿದ್ದಾರೆ.ಅವರ ‘ಬೊಗಸೆಯೊಳಗಿನ ಚುಟುಕು ಸಾಗರ’ ಕೃತಿಗೆ ಡಾ. ಅಂಬಾ ಎಂ.ಜಿ.ಆರ್. ಅರಸ್ ದತ್ತಿ ಬಹುಮಾನ ಲಭಿಸಿದ್ದು, ಈ ಬಹುಮಾನವು ₹6,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಪ್ರಸ್ತುತ ವಿ. ಸೀತಾಲಕ್ಷ್ಮಿ ವರ್ಮ ಅವರು ಶ್ರೀ ಸತ್ಯಸಾಯಿ ಲೋಕ ಸೇವಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಎಂ.ಎ. ಹಾಗೂ ಬಿ.ಎಡ್. ಪದವೀಧರರಾಗಿದ್ದಾರೆ.ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ಮಾನಸ ಅವರು ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಿದ್ದು, ಪ್ರಶಸ್ತಿ ಪ್ರದಾನ ಸಮಾರಂಭದ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.ಸ್ಥಳೀಯ ಸಾಹಿತ್ಯ ವಲಯ ಹಾಗೂ ವಿಟ್ಲ ಭಾಗದ ಸಾಹಿತ್ಯಾಸಕ್ತರು ವಿ. ಸೀತಾಲಕ್ಷ್ಮಿ ವರ್ಮ ಅವರ ಈ ಸಾಧನೆಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

- Advertisement -

Related news

error: Content is protected !!