Monday, June 29, 2026
spot_imgspot_img
spot_imgspot_img

ಕುಂಬಳೆ: ಶಾಲಾ ಆವರಣದಲ್ಲಿ ಗಾಂಜಾ ಗಿಡ ಪತ್ತೆ; ಅಬಕಾರಿ ಇಲಾಖೆ ವಶಕ್ಕೆ

- Advertisement -
- Advertisement -

ಕುಂಬಳೆ, ಜೂ.29: ಕುಂಬಳೆ ಸಮೀಪದ ಬಂಬ್ರಾಣದ ಖಾಸಗಿ ಶಾಲೆಯ ಆವರಣದಲ್ಲಿ ಗಾಂಜಾ ಗಿಡವೊಂದು ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.ಶಾಲೆಯ ಮೈದಾನದಲ್ಲಿ ಆಟವಾಡಲು ಬಂದಿದ್ದ ಸ್ಥಳೀಯ ಕೆಲ ಯುವಕರು ಅನುಮಾನಾಸ್ಪದ ಗಿಡವನ್ನು ಗಮನಿಸಿ ಅಬಕಾರಿ ಇಲಾಖೆಗೆ ಮಾಹಿತಿ ನೀಡಿದರು. ಮಾಹಿತಿ ಪಡೆದ ಅಬಕಾರಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ಸುಮಾರು 50 ಸೆ.ಮೀ. ಎತ್ತರದ ಗಾಂಜಾ ಗಿಡ ಪತ್ತೆಯಾಗಿದೆ.

ಅಧಿಕಾರಿಗಳು ಗಿಡವನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಗಿಡವು ಸ್ವಯಂ ಬೆಳೆದಿದೆಯೇ ಅಥವಾ ಯಾರಾದರೂ ಉದ್ದೇಶಪೂರ್ವಕವಾಗಿ ನೆಟ್ಟಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.ಅಬಕಾರಿ ಇಲಾಖೆ ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಯ ಕುರಿತು ಹೆಚ್ಚಿನ ಮಾಹಿತಿ ತನಿಖೆಯ ಬಳಿಕವೇ ತಿಳಿದುಬರಲಿದೆ

- Advertisement -

Related news

error: Content is protected !!