Thursday, September 10, 2026
spot_imgspot_img
spot_imgspot_img

ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್‌ಸೈಟ್: ಪ್ರಕರಣ ದಾಖಲು

- Advertisement -
- Advertisement -

ಕೊಲ್ಲೂರು: ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ವೊಂದನ್ನು ಆರಂಭಿಸಿ, ದೇವಳದ ಕೊಠಡಿಗಳನ್ನು ಕಾಯ್ದಿರಿಸುವ ನೆಪದಲ್ಲಿ ವಂಚನೆ ನಡೆಸಿರುವ ಆರೋಪಕ್ಕೆ ಸಂಬಂಧಿಸಿ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದೇವಸ್ಥಾನದ ಅಧಿಕೃತ ವೆಬ್‌ಸೈಟ್‌ಗೆ ಬದಲಾಗಿ, ಅಪರಿಚಿತ ವ್ಯಕ್ತಿಗಳು ‘Hotel Accommodation’ ಎಂಬ ಹೆಸರಿನಲ್ಲಿ jagadambikaguesthouse.xyz ಎಂಬ ಅನಧಿಕೃತ ನಕಲಿ ವೆಬ್‌ಸೈಟ್‌ನ್ನು ಅಕ್ರಮ ಲಾಭದ ಉದ್ದೇಶದಿಂದ ಆರಂಭಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಈ ನಕಲಿ ವೆಬ್‌ಸೈಟ್‌ ಮೂಲಕ ಹಲವು ಭಕ್ತರಿಗೆ ಜಗದಾಂಬಿಕಾ ಅತಿಥಿಗೃಹದ ಕೊಠಡಿಗಳನ್ನು ಕಾಯ್ದಿರಿಸುವುದಾಗಿ ತಿಳಿಸಿ, ವಾಟ್ಸಾಪ್‌ ಮೂಲಕ ಕ್ಯೂಆರ್ ಕೋಡ್‌ಗಳನ್ನು ಕಳುಹಿಸಿ ಹಣ ಪಡೆದುಕೊಳ್ಳಲಾಗಿದೆ. ಬಳಿಕ ನಕಲಿ ರಶೀದಿಗಳನ್ನು ನೀಡಿ, ದೇವಳದ ಕೊಠಡಿಗಳನ್ನು ಕಾಯ್ದಿರಿಸುವ ವಿಚಾರದಲ್ಲಿ ಭಕ್ತರಿಗೆ ವಂಚಿಸಿ ಹಣ ದೋಚಲಾಗುತ್ತಿದೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಈ ದೂರಿನ ಆಧಾರದ ಮೇಲೆ ಕೊಲ್ಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

- Advertisement -

Related news

error: Content is protected !!