Saturday, August 8, 2026
spot_imgspot_img
spot_imgspot_img

ಮನೆಯಲ್ಲೇ ಕುಳಿತು SIR ಸ್ಟೇಟಸ್‌ ಚೆಕ್‌ ಮಾಡಿ: ಚುನಾವಣಾ ಆಯೋಗದಿಂದ ಹೊಸ ವೆಬ್‌ಸೈಟ್‌

- Advertisement -
- Advertisement -

ಬೆಂಗಳೂರು: ರಾಜ್ಯದಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಹಾಗೂ SIR ಪ್ರಕ್ರಿಯೆ ಪೂರ್ಣಗೊಂಡಿದೆಯೇ ಎಂಬುದನ್ನು ಮನೆಯಲ್ಲೇ ಕುಳಿತು ಪರಿಶೀಲಿಸಲು ಚುನಾವಣಾ ಆಯೋಗ ಹೊಸ ವ್ಯವಸ್ಥೆ ಜಾರಿಗೆ ತಂದಿದೆ.ಮತದಾರರು ತಮ್ಮ EPIC ನಂಬರ್‌ (ವೋಟರ್‌ ಐಡಿ ಸಂಖ್ಯೆ) ನಮೂದಿಸುವ ಮೂಲಕ ಆನ್‌ಲೈನ್‌ನಲ್ಲಿ ತಮ್ಮ ವಿವರಗಳನ್ನು ಪರಿಶೀಲಿಸಬಹುದು. ಪರಿಶೀಲನೆ ವೇಳೆ ತಮ್ಮ ಹೆಸರು ASDDO ಪಟ್ಟಿಯಲ್ಲಿ ಸೇರ್ಪಡೆಯಾಗಿರುವುದು ಕಂಡುಬಂದರೆ, ಅಗತ್ಯ ದಾಖಲೆಗಳೊಂದಿಗೆ BLO (ಬೂತ್‌ ಮಟ್ಟದ ಅಧಿಕಾರಿ) ಅವರನ್ನು ಸಂಪರ್ಕಿಸಿ ವಿವರಗಳನ್ನು ಸಲ್ಲಿಸಬಹುದು.

ಅಲ್ಲದೆ, ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಳ್ಳಲು Form-6 ಅನ್ನು ಆನ್‌ಲೈನ್‌ನಲ್ಲಿ ಸಲ್ಲಿಸುವ ಅವಕಾಶವೂ ಇದೆ.

ಏನಿದು ASDDO ಪಟ್ಟಿ?

ASDDO ಎಂದರೆ Absentee, Shifted, Dead, Duplicate and Others. ಅಂದರೆ ಗೈರುಹಾಜರಾದವರು, ಸ್ಥಳಾಂತರಗೊಂಡವರು, ಮೃತಪಟ್ಟವರು, ನಕಲಿ ಮತದಾರರು ಹಾಗೂ ಇತರ ಕಾರಣಗಳಿಂದ ಗುರುತಿಸಲ್ಪಟ್ಟ ಮತದಾರರನ್ನು ಒಳಗೊಂಡ ಪಟ್ಟಿಯಾಗಿದೆ.ರಾಜ್ಯದಲ್ಲಿ ಸುಮಾರು 1.11 ಕೋಟಿ ಮತದಾರರನ್ನು ASDDO ಪಟ್ಟಿಗೆ ಸೇರಿಸಲಾಗಿದೆ ಎಂದು ತಿಳಿಸಲಾಗಿದೆ. ಈ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂಬುದನ್ನು ಮತದಾರರು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು.

ASDDO ಪಟ್ಟಿಯಲ್ಲಿ ತಮ್ಮ ಹೆಸರು ಹುಡುಕಲು karnataka-asddo-lookup.vercel.app ವೆಬ್‌ಸೈಟ್‌ಗೆ ಭೇಟಿ ನೀಡಿ EPIC ನಂಬರ್‌ ನಮೂದಿಸಬೇಕು. “ಒಳ್ಳೆಯ ಸುದ್ದಿ, ಈ ಗುರುತಿನ ಚೀಟಿ ತೆಗೆದು ಹಾಕಿದ ಪಟ್ಟಿಯಲ್ಲಿ ಇಲ್ಲ” ಎಂಬ ಸಂದೇಶ ಬಂದರೆ, ಆ ASDDO ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲ ಎಂಬುದು ದೃಢವಾಗುತ್ತದೆ.ಆದರೆ ASDDO ಪಟ್ಟಿಯಲ್ಲಿ ಹೆಸರು ಇಲ್ಲದಿರುವುದು ಮಾತ್ರ ಪ್ರಸ್ತುತ ಮತದಾರರ ಪಟ್ಟಿಯಲ್ಲಿ ಹೆಸರು ಇದೆ ಎಂಬುದಕ್ಕೆ ಅಂತಿಮ ದೃಢೀಕರಣವಲ್ಲ. ತಮ್ಮ ಹೆಸರು ಪ್ರಸ್ತುತ ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗದ ಅಧಿಕೃತ voters.eci.gov.in ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು ಅಥವಾ ತಮ್ಮ ವ್ಯಾಪ್ತಿಯ BLO ಅವರನ್ನು ಸಂಪರ್ಕಿಸಬಹುದು.ಮತದಾರರ ಅಧಿಕೃತ ವೆಬ್‌ಸೈಟ್: voters.eci.gov.in

- Advertisement -

Related news

error: Content is protected !!