Wednesday, July 22, 2026
spot_imgspot_img
spot_imgspot_img

ಪುತ್ತೂರು: 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಿಹಾರದಲ್ಲಿ ಬಂಧನ

- Advertisement -
- Advertisement -

ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅ.ಕ್ರ.68/2018ರ ಕಲಂ 399, 402 IPC ಹಾಗೂ 25 arms Act ಪ್ರಕರಣದಲ್ಲಿ ಸುಮಾರು 7ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಿಹಾರದಲ್ಲಿ ಬಂಧಿಸಲಾಗಿದೆ.

ಬಿಹಾರದ ಬೇಗುಸಾರೈ ನಿವಾಸಿ ಟುಣ್ ಟುಣ್ ಕುಮಾರ್ (31) ಎಂಬಾತನನ್ನು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ HC396 ಮಧು ಕೆ.ಎನ್, PC 1968 ಅಸ್ತಮ್ ಆರ್ ಹಾಗೂ PC 2445 ನಾಗೇಶ್ ಕೆ.ಸಿ. ಅವರ ತಂಡ ಬಿಹಾರದಲ್ಲಿ ದಸ್ತಗಿರಿ ನಡೆಸಿ ಬಂಧಿಸಿದೆ.

ಬಂಧಿತ ಆರೋಪಿಯನ್ನು ದಿನಾಂಕ ಏ 25 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೋಲಿಸರು ತಿಳಿಸಿದ್ದಾರೆ.

- Advertisement -

Related news

error: Content is protected !!