Monday, May 6, 2024
spot_imgspot_img
spot_imgspot_img

ಕಾರವಾರ : ಕಾಳಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 6 ಮಂದಿ ದುರ್ಮರಣ

- Advertisement -G L Acharya panikkar
- Advertisement -
This image has an empty alt attribute; its file name is creative2-1024x1024.jpeg

ಕಾರವಾರ : ಕಾಳಿ ನದಿಯಲ್ಲಿ ಒಂದೇ ಕುಟುಂಬದ ಆರು ಪ್ರವಾಸಿಗರು ಮುಳುಗಿ ಸಾವನ್ನಪ್ಪಿರುವಂತಹ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಅಕ್ವಾಡ ಗ್ರಾಮದ ಬಳಿ ಸಂಭವಿಸಿದೆ.

ಮೃತರನ್ನು ನಜೀರ್ ಅಹ್ಮದ್ (40), ರೇಷಾ ಉನ್ನಿಸಾ (38), ಇಫ್ರಾ‌ ಅಹ್ಮದ್ (15) , ಅಬೀದ್ ಅಹ್ಮದ್ (12), ಅಲ್ಛೀಯಾ ಅಹ್ಮದ್ (10) ಮತ್ತು
ಮೋಹಿನ್ ( 6) ಎಂದು ಗುರುತಿಸಲಾಗಿದೆ.

ಈಜಾಡಲೆಂದು ನದಿಗಳಿದಿದ್ದ ಆರು ಜನರ ಪೈಕಿ ಬಾಲಕಿಯೊಬ್ಬಳು ನೀರಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಗಮನಿಸಿದ ಉಳಿದ ಐವರು ಆಕೆಯನ್ನು ರಕ್ಷಣೆ ಮಾಡಲು ಹೋಗಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಪ್ರವಾಸಕ್ಕೆಂದು ಒಟ್ಟು 8 ಮಂದಿ ತಂಡ ತೆರಳಿದ್ದು, ಆ ಪೈಕಿ ಇಬ್ಬರು ಮಹಿಳೆಯರು ನೀರಿಗೆ ಇಳಿದಿರಲಿಲ್ಲ ಎನ್ನಲಾಗುತ್ತಿದೆ. ಸದ್ಯ ಕಾಳಿ ನದಿಯಿಂದ ಆರು ಮೃತದೇಹಗಳನ್ನು ಹೊರತೆಗೆಯಲಾಗಿದೆ. ದಾಂಡೇಲಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!