
ಹೊಸದಿಲ್ಲಿ: ಸೌದಿ ಅರೇಬಿಯಾದಲ್ಲಿ ಭದ್ರತಾ ಕಳವಳಗಳ ಹಿನ್ನೆಲೆಯಲ್ಲಿ ಭಾರತೀಯ ವಿಮಾನ ಯಾನ ಸಂಸ್ಥೆ ಇಂಡಿಗೊ, ಸೌದಿ ಅರೇಬಿಯಾಕ್ಕೆ ತನ್ನ ವಿಮಾನಗಳ ಹಾರಾಟ ರದ್ದತಿಯನ್ನು ವಿಸ್ತರಿಸಿದೆ ಎಂದು ರಿಯಾದ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಶುಕ್ರವಾರ ದೃಢಪಡಿಸಿದೆ.“ರಿಯಾದ್‌ಗೆ ತೆರಳುವ ಮತ್ತು ಅಲ್ಲಿಂದ ಹೊರಡುವ ಇಂಡಿಗೋ ವಿಮಾನಗಳನ್ನು ಅಕ್ಟೋಬರ್ 31ರವರೆಗೆ ರದ್ದುಗೊಳಿಸಲಾಗಿದೆ.
ಅದೇ ರೀತಿ ದಮ್ಮಾಮ್ ಮತ್ತು ಮದೀನಾಕ್ಕೆ ತೆರಳುವ ಹಾಗೂ ಅಲ್ಲಿಂದ ಹೊರಡುವ ವಿಮಾನಗಳನ್ನು ಅಕ್ಟೋಬರ್ 27ರವರೆಗೆ ರದ್ದುಗೊಳಿಸಲಾಗಿದೆ’ ಎಂದು ರಾಯಭಾರ ಕಚೇರಿ ‘ಎಕ್ಸ್’ನ ಪೋಸ್ಟ್‌ನಲ್ಲಿ ತಿಳಿಸಿದೆ.ಸೌದಿ ಅರೇಬಿಯಾದ ವಿಮಾನ ನಿಲ್ದಾಣಗಳು, ಇಂಧನ ಸ್ಥಾವರಗಳು ಮತ್ತು ಇತರ ಪ್ರಮುಖ ಮೂಲ ಸೌಕರ್ಯಗಳನ್ನು ಗುರಿಯಾಗಿರಿಸಿಕೊಂಡು ಡೋನ್ ಮತ್ತು ಕ್ಷಿಪಣಿ ದಾಳಿಗಳು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ವಿಮಾನ ಸಂಚಾರ ವ್ಯತ್ಯಯ ಉಂಟಾಗಿದೆ.ದೇಶದ ವಿರುದ್ಧ ಈ ಸುದೀರ್ಘ ಕಾರ್ಯಾಚರಣೆಯಲ್ಲಿ ಯೆಮೆನ್ ಇರಾನ್ ಬೆಂಬಲಿತ ಹೌತಿಗಳು ತೊಡಗಿಸಿಕೊಂಡಿದ್ದಾರೆ.ಇತರ ಭಾರತೀಯ ವಿಮಾನ ಯಾನ ಸಂಸ್ಥೆಗಳು ಕೂಡ ಸೌದಿ ಅರೇಬಿಯಾಕ್ಕೆ ತೆರಳುವ ಮತ್ತು ಅಲ್ಲಿಂದ ಹೊರಡುವ ತಮ್ಮ ವಿಮಾನಗಳ ಸಂಚಾರ ರದ್ದತಿಯನ್ನು ಈ ಮೊದಲೇ ವಿಸ್ತರಿಸಿದ್ದವು.
ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅಕ್ಟೋಬರ್ 24ರವರೆಗೆ ಎಲ್ಲಾ ಮಾರ್ಗಗಳಲ್ಲಿ ವಿಮಾನಗಳ ಸಂಚಾರವನ್ನು ರದ್ದುಗೊಳಿಸಿದೆ. ಅಕಾಸಾ ಏರ್ ಅಕ್ಟೋಬರ್ 27ರವರೆಗೆ ಎಲ್ಲಾ ಮಾರ್ಗಗಳಲ್ಲಿ ವಿಮಾನ ಸಂಚಾರವನ್ನು ಅಮಾನತುಗೊಳಿಸಿದೆ.








