Wednesday, June 17, 2026
spot_imgspot_img
spot_imgspot_img

ಸೌದಿಯಿಂದ ಕಚ್ಚಾತೈಲ ಹೊತ್ತ ಹಡಗು ಮುಂಬೈಗೆ ಆಗಮನ: ಹಾರ್ಮುಜ್ ಜಲಸಂಧಿ ದಾಟಿದ ಮೊದಲ ಟ್ಯಾಂಕರ್

- Advertisement -
- Advertisement -

ಮುಂಬೈ: ಸೌದಿ ಅರೇಬಿಯಾದಿಂದ ಕಚ್ಚಾತೈಲ ಹೊತ್ತ ಲೈಬೀರಿಯಾ ಧ್ವಜಧಾರಿ ‘ಶೆನ್ಹೋಂಗ್ ಸೂಝ್ಮ್ಯಾಕ್ಸ್’ ತೈಲ ಹಡಗು ಬುಧವಾರ ಮುಂಬೈ ಬಂದರನ್ನು ತಲುಪಿದೆ. ಇರಾನ್–ಅಮೆರಿಕ ನಡುವಿನ ಸಂಘರ್ಷದ ಬಳಿಕ ಹಾರ್ಮುಜ್ ಜಲಸಂಧಿಯನ್ನು ದಾಟಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ ಇದಾಗಿದೆ.

ಸೌದಿ ಅರೇಬಿಯಾದ ರಾಸ್ ತನುರ ಬಂದರಿನಲ್ಲಿ ಮಾರ್ಚ್ 1ರಂದು ಹಡಗಿಗೆ ಕಚ್ಚಾತೈಲ ತುಂಬಿಸಲಾಗಿತ್ತು. ಮಾರ್ಚ್ 3ರಂದು ಅದು ಅಲ್ಲಿಂದ ಹೊರಟಿದ್ದು, ಮಾರ್ಚ್ 8ರಂದು ಹಾರ್ಮುಜ್ ಜಲಸಂಧಿ ಪ್ರದೇಶದಲ್ಲಿ ಸಾಗುತ್ತಿರುವುದು ಸಾಗರ ಮಾರ್ಗದ ದತ್ತಾಂಶಗಳಿಂದ ತಿಳಿದುಬಂದಿತ್ತು. ಅಪಾಯಕಾರಿ ಪ್ರದೇಶವನ್ನು ದಾಟುವ ವೇಳೆ ಹಡಗು ತನ್ನ ಸ್ವಯಂಚಾಲಿತ ಗುರುತು ವ್ಯವಸ್ಥೆ (AIS) ಟ್ರಾನ್ಸ್‌ಪೋಂಡರ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಬಳಿಕ ಮಾರ್ಚ್ 9ರಂದು ಅದು ಮತ್ತೆ ಜಾಡು ಪತ್ತೆ ಜಾಲದಲ್ಲಿ ಕಾಣಿಸಿಕೊಂಡಿತ್ತು..

ಈ ತೈಲ ಹಡಗು ಬುಧವಾರ ಮಧ್ಯಾಹ್ನ ಸುಮಾರು 1 ಗಂಟೆ ವೇಳೆಗೆ ಮುಂಬೈ ಬಂದರಿನಲ್ಲಿ ಲಂಗರು ಹಾಕಿದ್ದು, ಅದರಲ್ಲಿ ಸುಮಾರು 1,35,335 ಮೆಟ್ರಿಕ್ ಟನ್ ಕಚ್ಚಾತೈಲ ಇದ್ದು, ಅದನ್ನು ಪೂರ್ವ ಮುಂಬೈಯ ಮಹುಲ್‌ನ ತೈಲಗಾರಗಳಿಗೆ ಪೂರೈಸಲಾಗುತ್ತದೆ.ಈ ಹಡಗು ಶೆನ್ಹೋಂಗ್ ಶಿಪ್ಪಿಂಗ್ ಲಿಮಿಟೆಡ್ ಕಂಪನಿಯ ಮಾಲೀಕತ್ವದಲ್ಲಿದ್ದು, ಅದರ ನಿರ್ವಹಣೆಯನ್ನು ಅತೆನ್ಸ್‌ನ ಡೈನಕೋಮ್ ಟ್ಯಾಂಕರ್ ಮ್ಯಾನೇಜ್‌ಮೆಂಟ್ ಲಿಮಿಟೆಡ್ ಮಾಡುತ್ತಿದೆ. ಹಡಗಿನ ಕ್ಯಾಪ್ಟನ್ ಭಾರತೀಯರಾಗಿದ್ದು, ಭಾರತೀಯರು, ಪಾಕಿಸ್ತಾನೀಯರು ಹಾಗೂ ಫಿಲಿಪ್ಪೀನ್ಸ್ ನಾಗರಿಕರು ಸೇರಿ ಒಟ್ಟು 29 ಸಿಬ್ಬಂದಿ ಹಡಗಿನಲ್ಲಿ ಇದ್ದರು.

ಇದಕ್ಕೂ ಮೊದಲು, ಹಾರ್ಮುಜ್ ಜಲಸಂಧಿಯನ್ನು ದಾಟುವ ಹಡಗುಗಳು ಇರಾನ್‌ನಿಂದ ಅನುಮತಿ ಪಡೆಯಬೇಕು ಎಂದು ಇರಾನ್‌ನ ಇಸ್ಲಾಮಿಕ್ ರೆವಲೂಶನರಿ ಗಾರ್ಡ್ಸ್ ಕಾರ್ಪ್ಸ್ (IRGC) ಎಚ್ಚರಿಕೆ ನೀಡಿತ್ತು. ಈ ಎಚ್ಚರಿಕೆಯನ್ನು ಕಡೆಗಣಿಸಿದ ಎಕ್ಸ್‌ಪ್ರೆಸ್ ರೋಮ್ ಮತ್ತು ಮಯೂರೀ ನಾರೀ ಎಂಬ ಎರಡು ಹಡಗುಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಐಆರ್‌ಜಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಥಾಯ್ಲೆಂಡ್ ಧ್ವಜ ಹೊಂದಿರುವ ಮಯೂರೀ ನಾರೀ ಸರಕು ಹಡಗು ಗುಜರಾತ್‌ನ ಕಾಂಡ್ಲಾ ಬಂದರಿನತ್ತ ಪ್ರಯಾಣಿಸುತ್ತಿತ್ತು ಎಂದು ತಿಳಿದುಬಂದಿದೆ.ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳ ಮೇಲಿನ ನಿಯಂತ್ರಣವನ್ನು ಇರಾನ್ ಇನ್ನಷ್ಟು ಕಠಿಣಗೊಳಿಸಿದೆ ಎಂದು ಅದರ ಸರಕಾರಿ ಮಾಧ್ಯಮಗಳು ವರದಿ ಮಾಡಿವೆ.

- Advertisement -

Related news

error: Content is protected !!