- Advertisement -
- Advertisement -

ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನ ಬಣಕಲ್ ಸಮೀಪದ ಕಾಫಿ ತೋಟದಲ್ಲಿ ನೆಲೆಸಿದ್ದ ಐವರು ಅಕ್ರಮ ಬಾಂಗ್ಲಾ ವಲಸಿಗರನ್ನು ಪೊಲೀಸರು ಬಂಧಿಸಿದ್ದಾರೆ.
ಜಹಾಂಗೀರ್, ಫೈಸುದ್ದಿನ್, ನುಮನ್ ಬಶೀರ್, ಮಹಮದ್ ಹುಮೈನ್, ಮಹಮದ್ ಹಸೀಬುಲ್ ಬಂಧಿತರು.ಜಿಲ್ಲೆಯಲ್ಲಿ ಎಸ್ಟೇಟ್ಗಳು, ರೆಸಾರ್ಟ್ ಮತ್ತು ಹೋಂಸ್ಟೇಗಳು ಹೆಚ್ಚು ಇರುವುದರಿಂದ ಕೆಲಸಕ್ಕೆ ಬಂದವರ ದಾಖಲೆಗಳನ್ನು ಪೊಲೀಸರು ಎಲ್ಲೆಡೆ ಪರಿಶೀಲಿಸುತ್ತಿದ್ದಾರೆ. ಬಣಕಲ್ ಠಾಣೆ ವ್ಯಾಪ್ತಿಯ ತೋಟವೊಂದರಲ್ಲಿ ದಾಖಲೆ ಸಂಗ್ರಹಿಸುವ ವೇಳೆ ಅಕ್ರಮ ವಲಸಿಗರು ಪತ್ತೆಯಾಗಿದ್ದಾರೆ.`
ಅವರನ್ನು ವಿಚಾರಣೆ ಮಾಡಿದಾಗ ಬಾಂಗ್ಲಾ ದೇಶದ ಗುರುತಿನ ಚೀಟಿ ಸಿಕ್ಕಿದೆ. ಕೆಲವರು ಕುಟುಂಬ ಸಮೇತ ಬಂದಿದ್ದಾರೆ. ಇಲ್ಲಿಗೆ ಹೇಗೆ ಬಂದರು, ಕರೆ ತಂದ ಏಜೆಂಟರು ಯಾರು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರಕುಮಾರ್ ದಯಾಮ ತಿಳಿಸಿದರು.
- Advertisement -








