Wednesday, July 8, 2026
spot_imgspot_img
spot_imgspot_img

ಚಲಿಸುತ್ತಿದ್ದ ಆಟೋದ ಮೇಲೆ ಉರುಳಿ ಬಿದ್ದ ರಾಸಾಯನಿಕ ಸಾಗಣೆ ಟ್ಯಾಂಕ‌ರ್: ಇಬ್ಬರು ಸಾವು

- Advertisement -
- Advertisement -

ಥಾಣೆ, ಜು. 8: ಚಲಿಸುತ್ತಿದ್ದ ಆಟೋ ರಿಕ್ಷಾ ಮೇಲೆ ರಾಸಾಯನಿಕ ಸಾಗಣೆ ಟ್ಯಾಂಕರ್ ನಿಯಂತ್ರಣ ಕಳೆದುಕೊಂಡು ಉರುಳಿ ಬಿದ್ದ ಪರಿಣಾಮ ಆಟೋ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿ, ಆಟೋದಲ್ಲಿದ್ದ ಇಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ಥಾಣೆಯ ಜನನಿಬಿಡ ಫೋದ್ ಬಂದರ್‌ ರಸ್ತೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಆಟೋ ರಿಕ್ಷಾ ಚಾಲಕ ದಶರಥ್ ಪವಾರ್‌ ಹಾಗೂ ಪ್ರಯಾಣಿಕ ಮುಹಮ್ಮದ್ ಅಮೀನ್ ಎಂದು ಗುರುತಿಸಲಾಗಿದೆ. ಆಟೋ ರಿಕ್ಷಾದಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಆಟೋ ರಿಕ್ಷಾ ಮತ್ತು ರಾಸಾಯನಿಕ ಸಾಗಣೆ ಟ್ಯಾಂಕ‌ರ್ ಒಂದೇ ದಿಕ್ಕಿನಲ್ಲಿ ಸಂಚರಿಸುತ್ತಿದ್ದ ವೇಳೆ ಮಧ್ಯಾಹ್ನ ಸುಮಾರು 12.30ರ ವೇಳೆಗೆ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಅಪಘಾತದ ತೀವ್ರತೆ ಹೆಚ್ಚಾಗಿದ್ದರೂ, ಟ್ಯಾಂಕರ್‌ನಿಂದ ಯಾವುದೇ ರಾಸಾಯನಿಕ ಸೋರಿಕೆಯಾಗಿಲ್ಲ ಎಂದು ಪೊಲೀಸರು ದೃಢಪಡಿಸಿದ್ದಾರೆ.ಘಟನೆಯ ಕುರಿತು ಪ್ರತಿಕ್ರಿಯಿಸಿದ ಸಂಚಾರ ವಿಭಾಗದ ಹಿರಿಯ ಪೊಲೀಸ್ ಇನ್‌ಸ್ಪೆಕ್ಟರ್ ರಾಹುಲ್ ಮ್ಹಾಸ್ಕೆ ‘ಸುದ್ದಿ ತಿಳಿಯುತ್ತಿದ್ದಂತೆಯೇ ಸಂಚಾರಿ ಪೊಲೀಸರು ಹಾಗೂ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದವು. ಉರುಳಿ ಬಿದ್ದಿದ್ದ ರಾಸಾಯನಿಕ ಸಾಗಣೆ ಟ್ಯಾಂಕ‌ರ್ ಅನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದೇವೆ. ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಟ್ಯಾಂಕ‌ರ್ ಅನ್ನು ರಸ್ತೆ ಬದಿಗೆ ಸ್ಥಳಾಂತರಿಸಲಾಗಿದೆ.

ಟ್ಯಾಂಕರ್ ನ ಕೆಳಗೆ ಸಿಲುಕಿ ಆಟೋ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿರುವುದು ಕಂಡುಬಂದಿದೆ’ ಎಂದು ತಿಳಿಸಿದ್ದಾರೆ.ತೆರವು ಕಾರ್ಯಾಚರಣೆ ನಡೆದ ಹಿನ್ನೆಲೆಯಲ್ಲಿ ಈ ಜನನಿಬಿಡ ರಸ್ತೆಯಲ್ಲಿ ಕೆಲಕಾಲ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತು ಎಂದು ಅವರು ತಿಳಿಸಿದ್ದಾರೆ.ಈ ಸಂಬಂಧ ರಾಸಾಯನಿಕ ಸಾಗಣೆ ಟ್ಯಾಂಕ‌ರ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.

- Advertisement -

Related news

error: Content is protected !!