Tuesday, August 4, 2026
spot_imgspot_img
spot_imgspot_img

ಬೆಂಗಳೂರು ನಗರ ಪೊಲೀಸ್ ಆಯುಕ್ತಾಲಯವನ್ನು 5 ಭಾಗಗಳಾಗಿ ವಿಭಜಿಸಲು ಸರ್ಕಾರಕ್ಕೆ ಪ್ರಸ್ತಾವ

- Advertisement -
- Advertisement -

ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಆಯುಕ್ತಾಲಯವನ್ನು ಐದು ಪ್ರತ್ಯೇಕ ಪೊಲೀಸ್ ಆಯುಕ್ತಾಲಯಗಳಾಗಿ ವಿಭಜಿಸಿ, ಪ್ರಸ್ತುತ ಪೊಲೀಸ್ ಆಯುಕ್ತರ ಹುದ್ದೆಯನ್ನು ಮುಖ್ಯ ಪೊಲೀಸ್ ಆಯುಕ್ತ (Chief Commissioner of Police) ಹುದ್ದೆಯಾಗಿ ಉನ್ನತೀಕರಿಸುವ ಪ್ರಸ್ತಾವವನ್ನು ರಾಜ್ಯ ಸರ್ಕಾರದ ಮುಂದಿಡಲಾಗಿದೆ.


ನಗರದ ಹೆಚ್ಚುತ್ತಿರುವ ಜನಸಂಖ್ಯೆ, ಐಟಿ ವಲಯದ ವಿಸ್ತರಣೆ, ಸೈಬರ್ ಅಪರಾಧ, ಸಂಚಾರ ದಟ್ಟಣೆ ಹಾಗೂ ವಿಐಪಿ ಭದ್ರತೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಉದ್ದೇಶದಿಂದ ಈ ಪ್ರಸ್ತಾವ ಸಲ್ಲಿಸಲಾಗಿದೆ.
ಪ್ರಸ್ತಾವದಂತೆ ಕೇಂದ್ರ, ಉತ್ತರ, ದಕ್ಷಿಣ, ಪೂರ್ವ ಹಾಗೂ ಪಶ್ಚಿಮ ಎಂಬ ಐದು ಪೊಲೀಸ್ ಆಯುಕ್ತಾಲಯಗಳನ್ನು ರಚಿಸಲಾಗುವುದು.

ಕೇಂದ್ರ ಆಯುಕ್ತಾಲಯದ ವ್ಯಾಪ್ತಿಯಲ್ಲಿ ವಿಧಾನಸೌಧ, ಹೈಕೋರ್ಟ್, ಕೆಎಸ್‌ಆರ್ ರೈಲು ನಿಲ್ದಾಣ, ಮೆಜೆಸ್ಟಿಕ್, ಪ್ರಮುಖ ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಸೂಕ್ಷ್ಮ ಪ್ರದೇಶಗಳು ಬರಲಿವೆ.


ಇದರೊಂದಿಗೆ ಹೊಸ ಡಿಸಿಪಿ ಹಾಗೂ ಎಸಿಪಿ ಹುದ್ದೆಗಳ ಸೃಜನೆ, ಮಹಿಳಾ ಠಾಣೆಗಳು, ನಿಯಂತ್ರಣ ಕೊಠಡಿಗಳು ಹಾಗೂ ಸಿಎಇಎನ್ ಪೊಲೀಸ್ ಘಟಕಗಳನ್ನು ಬಲಪಡಿಸುವ ಪ್ರಸ್ತಾವವೂ ಸಲ್ಲಿಕೆಯಾಗಿದೆ.

- Advertisement -

Related news

error: Content is protected !!