Monday, August 10, 2026
spot_imgspot_img
spot_imgspot_img

ವರ್ಕಾಡಿ: ಅಸೌಖ್ಯದಿಂದ ಯುವಕ ಮೃತ್ಯು

- Advertisement -
- Advertisement -

ವರ್ಕಾಡಿ: ವಿವಿಧ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದ ಯುವ ಮುಖಂಡನೋರ್ವ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.

ಮೃತರನ್ನು ಮಂಜೇಶ್ವರದ ವರ್ಕಾಡಿಯ ಪಾವಳ ಗುತ್ತು ನಿವಾಸಿ ಹಿರಿಯ ಪ್ರಗತಿಪರ ಕೃಷಿಕ ರಘುನಾಥ ಶೆಟ್ಟಿ ಮತ್ತು ವಿಜಯಲಕ್ಷ್ಮಿ ದಂಪತಿಯ ಪುತ್ರ ಸಂಘಪರಿವಾರದ ಮುಖಂಡ ರತೀಶ್ ಶೆಟ್ಟಿ ಪಾವಳ (36) ಎಂದು ಗುರುತಿಸಲಾಗಿದೆ.

ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ರತೀಶ್ ಶೆಟ್ಟಿಯವರು ಕಳೆದೆರಡು ದಿನಗಳಿಂದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಅಕ್ಟೋಬರ್ 21ರ ರಾತ್ರಿ ನಿಧನರಾದರು. .

ರತೀಶ್ ರವರು ಸಂಘ ಪರಿವಾರ, ವಿಶ್ವ ಹಿಂದೂ ಪರಿಷತ್, ಬಜರಂಗದಳ, ಹಿಂದೂ ಜಾಗರಣ ವೇದಿಕೆ, ಭಾರತೀಯ ಜನತಾ ಪಕ್ಷ, ಹಾಗೂ ದೇವಸ್ಥಾನ, ಮಂದಿರ, ದೈವಸ್ಥಾನದ ಕಾರ್ಯಕ್ರಮದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡವರಾಗಿದ್ದಾರೆ ಎಂದು ತಿಳಿದುಬಂದಿದೆ.

ಮೃತರು ತಂದೆ,ತಾಯಿ, ಹಾಗೂ, ಸಹೋದರಿ , ಅಳಿಯ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

- Advertisement -

Related news

error: Content is protected !!