Tuesday, September 22, 2026
spot_imgspot_img
spot_imgspot_img

ಉತ್ತರ ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: 20 ಕ್ಕೂ ಹೆಚ್ಚು ಜನರಿಗೆ ಗಾಯ

- Advertisement -
- Advertisement -

ಟೋಕಿಯೊ: ಸೋಮವಾರ ತಡರಾತ್ರಿ ಉತ್ತರ ಜಪಾನ್‌ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪೆಸಿಫಿಕ್ ಕರಾವಳಿ ಭಾಗಗಳಲ್ಲಿ 70 ಸೆಂಟಿಮೀಟರ್ ವರೆಗೆ ಸುನಾಮಿ ಅಲೆಗಳು ಉಂಟಾಗಿದೆ.

ಅಮೋರಿ ಕರಾವಳಿಯಲ್ಲಿ ತಡರಾತ್ರಿ ಭೂಕಂಪ ಮತ್ತು ಸುನಾಮಿ ನಂತರ ಜಪಾನ್‌ನಲ್ಲಿ ಸಾಕಷ್ಟು ಹಾನಿಯಾಗಿದೆ. ಹೊನ್ಶುವಿನ ಉತ್ತರ ತುದಿಯಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿ ಭೂಕಂಪ ಸಂಭವಿಸಿದ್ದು, ಹಲವಾರು ಕರಾವಳಿ ಪಟ್ಟಣಗಳಿಗೆ ಸಣ್ಣ ಸುನಾಮಿ ಅಲೆಗಳು ಬಡಿದಿವೆ.

ಅಮೋರಿಯ ದಕ್ಷಿಣದಲ್ಲಿರುವ ಇವಾಟೆಯಲ್ಲಿರುವ ಕುಜಿ ಬಂದರನ್ನು 70 ಸೆಂ.ಮೀಗಳಷ್ಟು ಅಲೆಗಳು ತಲುಪಿದವು. ಇತರ ಸಮುದಾಯಗಳು 50 ಸೆಂ.ಮೀಗಳಷ್ಟು ಎತ್ತರದ ಅಲೆಗಳನ್ನು ಸೃಷ್ಟಿಸಿವೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ.

ಭೂಕಂಪ ಪೀಡಿತ ಸುಮಾರು 800 ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಶಿಂಕನ್ಸೆನ್ ಸೇವೆಗಳು ಮತ್ತು ಕೆಲವು ಸ್ಥಳೀಯ ರೈಲುಗಳನ್ನು ನಿಲ್ಲಿಸಲಾಗಿದೆ. ಮುಂದಿನ ಸೂಚನೆಯ ವರೆಗೆ ಜನರು ತಾವಿರುವ ಸ್ಥಳವನ್ನು ಬಿಟ್ಟು ಎಲ್ಲೂ ಹೋಗದಂತೆ ಜನರಿಗೆ ಮುಖ್ಯ ಸಂಪುಟ ಕಾರ್ಯದರ್ಶಿ ಮಿನೋರು ಕಿಹರಾ ಎಚ್ಚರಿಸಿದ್ದಾರೆ.

- Advertisement -

Related news

error: Content is protected !!