Tuesday, September 22, 2026
spot_imgspot_img
spot_imgspot_img

ಲಂಚ ಪ್ರಕರಣ: ಬಜ್ಪೆ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಬಾಲಕೃಷ್ಣ ಲೋಕಾಯುಕ್ತ ಬಲೆಗೆ

- Advertisement -
- Advertisement -

ಮಂಗಳೂರು : ವಂಚನೆ ಪ್ರಕರಣವೊಂದರಲ್ಲಿಅಮಾನತು ಆಗಿದ್ದ ಹಣವನ್ನು ಬಿಡುಗಡೆ ಮಾಡಲು ಲಂಚ ಪಡೆದು ಕೊಳ್ಳುತ್ತಿದ್ದ ಬಜ್ಪೆ ಪೊಲೀಸ್ ನಿರೀಕ್ಷಕ ಬಾಲಕೃಷ್ಣ ಅವರನ್ನು ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಸೊತ್ತು ಸಹಿತ ಬಂಧಿಸಿರುವ ಘಟನೆ ಸೋಮವಾರ ಸಂಜೆ ವರದಿಯಾಗಿದೆ.ಬಜ್ಜೆ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣವೊಂದರಲ್ಲಿ ಸಂತ್ರಸ್ತರಿಂದ ಪೊಲೀಸ್ ನಿರೀಕ್ಷಕ ಬಾಲಕೃಷ್ಣ ಅವರು ಹಣವನ್ನು ಅಮಾನತು ಪಡಿಸಿಕೊಂಡಿದ್ದರು ಎನ್ನಲಾಗಿದೆ. ಅಮಾನತು ಮಾಡಲಾಗಿದ್ದ ಹಣವನ್ನು ವಾಪಾಸ್ ಕೇಳಲು ಬಂದಿದ್ದ ವೇಳೆ ಸಂತ್ರಸ್ತರನ್ನು ಪೂರ್ಣ ಪ್ರಮಾಣದ ಹಣ ನೀಡಬೇಕಿದ್ದರೆ 25 ಸಾವಿರ ರೂ. ಲಂಚ ನೀಡುವಂತೆ ಪೊಲೀಸ್ ನಿರೀಕ್ಷಕ ಬಾಲಕೃಷ್ಣ ಅವರು ಕೇಳಿದ್ದರು ಎನ್ನಲಾಗಿದೆ.

ಈ ಪೈಕಿ 15 ಸಾವಿರ ರೂ. ಮುಂಗಡವಾಗಿ ಪಡೆದುಕೊಂಡಿದ್ದ ಬಾಲಕೃಷ್ಣ ಅವರು ಇನ್ನೂ 10 ಸಾವಿರ ರೂ. ನೀಡುವಂತೆ ಸಂತ್ರಸ್ತರಿಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.ಈ ಪೈಕಿ 5 ಸಾವಿರ ರೂ. ಹಣವನ್ನು ಸೋಮವಾರ ಪಡೆದುಕೊಳ್ಳುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಲಂಚದ ಹಣ 5 ಸಾವಿರ ರೂ. ಸಹಿತ ಪೊಲೀಸ್ ನಿರೀಕ್ಷಕ ಬಾಲಕೃಷ್ಣ ಅವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!