Saturday, June 13, 2026
spot_imgspot_img
spot_imgspot_img

ದ.ಕ.ಜಿ.ಪ.ಕಿ.ಪ್ರಾ ಕಂಟಿಕ ಶಾಲೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ

- Advertisement -
- Advertisement -

ದ.ಕ.ಜಿ.ಪ.ಕಿ.ಪ್ರಾ.ಶಾಲೆ ಕಂಟಿಕ ಇಲ್ಲಿ ಶಾಲಾ ಮಕ್ಕಳು, ಶಿಕ್ಷಕ-ರಕ್ಷಕ ಬಳಗ, ಹಿರಿಯ ವಿದ್ಯಾರ್ಥಿಗಳು ಹಾಗೂ ಸ್ತ್ರೀ ಶಕ್ತಿ ಬಳಗದ ಒಗ್ಗೂಡುವಿಕೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಅರ್ಥಪೂರ್ಣವಾಗಿ ನಡೆಯಿತು.

ಗಣ್ಯವ್ಯಕ್ತಿಯಾಗಿ ಆಗಮಿಸಿದ ಶಾಲೆಯ ರೂವಾರಿ, ಹಿರಿಯರಾದ ಅನಂತ ಶೆಣೈ, ಕಂಟಿಕ ಧ್ವಜಾರೋಹಣ ನಡೆಸಿ, ತನ್ನ ಬಾಲ್ಯದ ದಿನಗಳನ್ನು ಮೆಲುಕು ಹಾಕಿ, ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ರಾಜೇಶ್ ವಹಿಸಿದ್ದರು. ಗೋಪಾಲ ಶೆಣೈ ಕಂಟಿಕ, ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್, ಹರಿಣಾಕ್ಷಿ ಮೋಹನ್ ದಾಸ್, ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಶ್ವೇತಾ ಹಾಗೂ ಮಹಾಬಲ ನಾಯ್ಕ ಕಲ್ಲಪಾಪು, ಜನಾರ್ಧನ ಸಪಲ್ಯಾ ಕಂಟಿಕ, ಮಾಧವ ಕಾಂಪ್ರಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಚೇತನಾ ಕುಮಾರಿ ಪಿ. ವಿ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

- Advertisement -

Related news

error: Content is protected !!