Thursday, May 2, 2024
spot_imgspot_img
spot_imgspot_img

ಎಂಟು ತಿಂಗಳ ಮಗು ಹೃದಯಾಘಾತದಿಂದ ಮೃತ್ಯು..!!

- Advertisement -G L Acharya panikkar
- Advertisement -
vtv vitla

ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದ ಎಂಟು ತಿಂಗಳ ಮಗು ಇಂಜೆಕ್ಷನ್ ಕಾರಣದಿಂದ ಹೃದಯಾಘಾತಕ್ಕೆ ಒಳಗಾಗಿದೆ ಎನ್ನುವ ಆರೋಪ ಕೇಳಿಬಂದಿದ್ದು ಕೊಟ್ಟಾಯಂ ಮೆಡಿಕಲ್ ಕಾಲೇಜು ವಿರುದ್ಧ ಮಗುವಿನ ಕುಟುಂಬಸ್ಥರು ರಾಜ್ಯ ಆರೋಗ್ಯ ಸಚಿವರಿಗೆ ದೂರು ನೀಡಿದ್ದಾರೆ.

ಕೊಟ್ಟಾಯಂ ಮೆಡಿಕಲ್ ಕಾಲೇಜಿಗೆ ಒಳಪಟ್ಟ ಮಕ್ಕಳ ವಿಭಾಗದ ವಿರುದ್ಧ ಕೊಟ್ಟಾಯಂ ಜಿಲ್ಲೆಯ ಮನಾರ್ಕಾಡ್ ನಿವಾಸಿ ಎಬಿ ಮತ್ತು ಜೋನ್ಸಿ ಎಂಬ ದಂಪತಿ ಆರೋಗ್ಯ ಸಚಿವರಿಗೆ ದೂರು ಸಲ್ಲಿಸಿದ್ದಾರೆ.

ಕಳೆದ ಮೇ 11ರಂದು ಎಂಟು ತಿಂಗಳ ಮಗುವಿಗೆ ಜ್ವರ ಕಾಣಿಸಿಕೊಂಡಿದ್ದು, ಪೋಷಕರು ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದರು. ಕೊರೊನೋತ್ತರ ಸೋಂಕಿನ ಎಫೆಕ್ಟ್‌ ನಿಂದಾಗಿ ಕವಾಸಕಿ ಎಂಬುದರ ಲಕ್ಷಣ ಗುರುತಿಸಿದ್ದ ವೈದ್ಯರು, ಅದೇ ದಿನ ರಾತ್ರಿ 9 ಗಂಟೆಗೆ ತೀವ್ರವಾದ ಇಂಜೆಕ್ಷನ್ ನೀಡಿದ್ದರು ಎನ್ನಲಾಗಿದೆ. ಆನಂತರ ಮಗುವನ್ನು ಸರಿಯಾಗಿ ನೋಡಿಕೊಂಡಿಲ್ಲ. ಈ ಚುಚ್ಚುಮದ್ದು ನೀಡುವುದರಿಂದ ಹೃದಯಾಘಾತದ ಅಪಾಯವಿದೆ ಎಂದು ತಿಳಿದಿದ್ದರೂ ವೈದ್ಯರು ನಿರ್ಲಕ್ಷ್ಯವಹಿಸಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಮಗು ಉಸಿರಾಡಲು ಕಷ್ಟ ಪಡುತ್ತಿದ್ದುದನ್ನು ಗಮನಿಸಿದ ಶಿಶುವಿನ ಪೋಷಕರು ಗಲಾಟೆ ಮಾಡಿದ್ದಾರೆ. ಬಳಿಕ ವೈದ್ಯರು ಪರೀಕ್ಷಿಸಿದಾಗ ಮಗುವಿನ ಸ್ಥಿತಿ ಗಂಭೀರವಾಗಿತ್ತು. ಇದರ ಬೆನ್ನಲೇ ಮಗು ಮೃತಪಟ್ಟಿದ್ದು ವೈದ್ಯರು ಮತ್ತು ಸಿಬಂದಿಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎನ್ನುವ ಆರೋಪವನ್ನು ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!