Saturday, June 13, 2026
spot_imgspot_img
spot_imgspot_img

ಸ್ನಾನ ಮಾಡಲು ನದಿಗೆ ಇಳಿದಿದ್ದ 8 ಮಂದಿ ಯುವಕರು ಸಾವು; ಮೂವರ ರಕ್ಷಣೆ

- Advertisement -
- Advertisement -

ಜೈಪುರ: ಸ್ನಾನ ಮಾಡಲು ನದಿಗೆ ಇಳಿದಿದ್ದ 11 ಯುವಕರಲ್ಲಿ 8 ಮಂದಿ ನೀರಿನಲ್ಲಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಟೋಂಕ್ ಜಿಲ್ಲೆಯ ಬನಾಸ್ ನದಿಯಲ್ಲಿ ನಡೆದಿದೆ.

ಮೃತರೆಲ್ಲರೂ ಜೈಪುರದ ನಿವಾಸಿಗಳೆಂದು ತಿಳಿದುಬಂದಿದೆ. ಜೈಪುರದಿಂದ 11 ಮಂದಿ ಯುವಕರ ಗುಂಪೊಂದು ಪಿಕ್ನಿಕ್‌ಗಾಗಿ ಟೋಂಕ್ ಜಿಲ್ಲೆಗೆ ಬಂದಿದ್ದರು.

ಈ ವೇಳೆ ಯುವಕರೆಲ್ಲರು ಸ್ನಾನಕ್ಕೆಂದು ಬನಾಸ್ ನದಿಗೆ ಇಳಿದಿದ್ದರು. ಅವರು ನದಿಯಲ್ಲಿ ಈಜುತ್ತಾ ಆಳದ ಪ್ರದೇಶಕ್ಕೆ ತೆರಳಿದ್ದರು. ಈ ಸಂದರ್ಭ ನೀರಿನ ಸೆಳೆತಕ್ಕೆ ಒಳಗಾಗಿ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರು ಯುವಕರನ್ನು ರಕ್ಷಿಸಲಾಗಿದೆ ಎಂದು ಟೋಂಕ್‌ನ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಸಾಂಗ್ವಾನ್ ತಿಳಿಸಿದ್ದಾರೆ.

- Advertisement -

Related news

error: Content is protected !!