


ಸಂಗಮ ಯುವಕ ಮಂಡಲ(ರಿ ) ಪಡಿಬಾಗಿಲು ಇದರ ಆಶ್ರಯದಲ್ಲಿ , ರೋಟರಿ ಕ್ಲಬ್ ಬ್ಲಡ್ ಬ್ಯಾಂಕ್ ಪುತ್ತೂರು ಇದರ ಸಹಭಾಗಿತ್ವದಲ್ಲಿ ಆಗಸ್ಟ್ 2 ರಂದು ನಡೆದ ರಕ್ತದಾನ ಶಿಬಿರದಲ್ಲಿ ಸುಮಾರು 50 ರಕ್ತ ದಾನಿಗಳು ರಕ್ತದಾನ ಮಾಡಿದರು.


ವಿಟ್ಲದ ಉದ್ಯಮಿ “ಆಸರೆ” ಪಡಿಬಾಗಿಲಿನ ಪ್ರಭಾಕರ ಶೆಟ್ಟಿ ಕಾರ್ಯಕ್ರಮ ವನ್ನು ಉದ್ಘಾಟನೆ ಮಾಡಿ ಸಂಘದ ಪ್ರಮುಖ ಬೇಡಿಕೆಯಾದ ಧ್ವನಿವರ್ಧಕ ಸೆಟ್ ನ್ನು ಕೊಡುಗೆಯಾಗಿ ನೀಡಿದರು.ಸುಮಾರು 25 ಕ್ಕಿಂತ ಹೆಚ್ಚು ಸಲ ರಕ್ತದಾನ ಮಾಡಿದ ಜಯಂತ ಶೆಟ್ಟಿ ಅಳಿಕೆ, ವಿಶ್ವನಾಥ ಪೂಜಾರಿ ಅಳಿಕೆ, ಬಿ ಟಿ ನಾಯ್ಕ ಕೇಪು ಇವರನ್ನು ವೇದಿಕೆಯಲ್ಲಿ ಗುರುತಿಸಲಾಯಿತು.

ಅತಿಥಿಗಳಾಗಿ ಕೇಪು ಗ್ರಾಮ ಪಂಚಾಯತಿನ ನಿಕಟ ಪೂರ್ವ ಅಧ್ಯಕ್ಷರಾದ ರಾಘವ ಮಣಿಯಾಣಿ, ಅಳಿಕೆ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಸಣ್ಣಗುತ್ತು, ಸಾಮಾಜಿಕ ಕಾರ್ಯಕರ್ತ ಬಾಲಕೃಷ್ಣ ಸುವರ್ಣ ಸಣ್ಣಗುತ್ತು, ವೈದ್ಯರುಗಳಾದ ರಾಮಕೃಷ್ಣ ರಾವ್, ಸೀತಾರಾಮ ಭಟ್ ಉಪಸ್ಥಿತರಿದ್ದರು.ಏತನ್ಮಧ್ಯೆ ಪುತ್ತೂರು ವಿಧಾನ ಸಭಾ ಶಾಸಕರಾದ ಅಶೋಕ್ ಕುಮಾರ್ ರೈ ಭೇಟಿ ಕೊಟ್ಟು ಸಂಘದ ಕಾರ್ಯ ಚಟುವಟಿಕೆಯನ್ನು ಕೊಂಡಾಡಿದರು, ಮಾತ್ರವಲ್ಲದೆ ಸಂಘದ ಅಭಿವೃದ್ಧಿಗೆ ಏಳು ಲಕ್ಷ ಅನುದಾನವನ್ನು ನೀಡುವುದಾಗಿ ಭರವಸೆ ನೀಡಿದರು.ಸಂಘದ ಅಧ್ಯಕ್ಷರಾದ ಸಂದೇಶ್. ಕೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದಿನೇಶ್ ಶೆಟ್ಟಿ ಪಡಿಬಾಗಿಲು ಧನ್ಯವಾದಗೈದರು.ಬಿ.ಟಿ. ನಾಯ್ಕ ಕೇಪು ಎಲ್ಲರನ್ನು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ಎಲ್ಲಾ ರಕ್ತ ದಾನಿಗಳಿಗೆ ರೋಟರಿ ಕ್ಲಬ್ ಪುತ್ತೂರು ಮತ್ತು ಸಂಘದ ವತಿಯಿಂದ ಪ್ರಮಾಣ ಪತ್ರ ನೀಡಲಾಯಿತು.








