Monday, October 19, 2026
spot_imgspot_img
spot_imgspot_img

ಉಪ್ಪಿನಂಗಡಿಯಲ್ಲಿ ತಲವಾರು ಪ್ರದರ್ಶಿಸಿ ಭೀತಿ: ಇಬ್ಬರು ಪೊಲೀಸರ ವಶಕ್ಕೆ

- Advertisement -
- Advertisement -

ಉಪ್ಪಿನಂಗಡಿ: ಶೆಣೈ ರಸ್ತೆಯಲ್ಲಿರುವ ಬಾರ್ ಸಮೀಪ ಮಾತಿನ ಚಕಮಕಿ ನಡೆದು ಗಲಾಟೆಯಾದ ವೇಳೆ ತಲವಾರು ಪ್ರದರ್ಶಿಸಿ ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ ಘಟನೆ ಅ. 18ರ ರಾತ್ರಿ ನಡೆದಿದೆ.ಮಂಜುನಾಥ್, ವಿಶ್ವನಾಥ ಹಾಗೂ ಮತ್ತೋರ್ವ ವ್ಯಕ್ತಿಯ ನಡುವೆ ಮಾತಿನ ಚಕಮಕಿ ನಡೆದು ಗಲಾಟೆಯಾಗಿತ್ತು.

ಈ ವೇಳೆ ಮಂಜುನಾಥ್ ಎಂಬಾತ ತನ್ನ ಬಳಿಯಿದ್ದ ತಲವಾರನ್ನು ಸಾರ್ವಜನಿಕವಾಗಿ ಪ್ರದರ್ಶಿಸಿ ಭೀತಿ ಉಂಟುಮಾಡಿದ್ದಾನೆ ಎಂದು ತಿಳಿದುಬಂದಿದೆ.ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉಪ್ಪಿನಂಗಡಿ ಪೊಲೀಸರು ಮಂಜುನಾಥ್ ಹಾಗೂ ವಿಶ್ವನಾಥನನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.

- Advertisement -

Related news

error: Content is protected !!