Tuesday, November 17, 2026
spot_imgspot_img
spot_imgspot_img

KPSC ನೇಮಕಾತಿ ಹಗರಣ; ಎಸ್‌ಐಟಿಯಿಂದ ಬಿ.ವಿ.ಗೀತಾ ಬಂಧನ

- Advertisement -
- Advertisement -

ಬೆಂಗಳೂರು : ಕೆಪಿಎಸ್ ಸಿ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಿಂದ ನೇಮಿತವಾಗಿರುವ ವಿಶೇಷ ತನಿಖಾ ತಂಡ (SIT) ತನಿಖೆಯನ್ನು ಚುರುಕುಗೊಳಿಸಿದೆ. ಇದರ ಭಾಗವಾಗಿ ಜಾಮೀನು ಪಡೆದು ಹೊರಗೆ ಬಂದಿದ್ದ ಕೆಪಿಎಸ್‌ಸಿ ಸದಸ್ಯೆ ಬಿ.ವಿ ಗೀತಾರನ್ನು ಇಂದು(ಮಂಗಳವಾರ) ಎಸ್ ಐ ಟಿ ಬಂಧನ ಮಾಡಿದೆ.ಎಸ್ ಐ ಟಿ ರಚನೆಯಾದ ಬಳಿಕ ಈಗಾಗಲೇ ಕೆಪಿಎಸ್ ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ರನ್ನು ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಇದರ ನಡುವೆ ಈಗಾಗಲೇ ಒಮ್ಮೆ ಬಂಧನವಾಗಿ ಜಾಮೀನು ಪಡೆದು ಹೊರಗೆ ಬಂದಿದ್ದ ಬಿ.ವಿ ಗೀತಾರನ್ನು ಈಗ ಎಸ್ ಐ ಟಿ ಪುನಃ ಬಂಧಿಸಿರುವುದು ತನಿಖೆ ಮತ್ತಷ್ಟು ಚುರುಕು ಪಡೆದುಕೊಂಡಿದೆ.

ಕೆಲ ದಿನಗಳ ಹಿಂದಷ್ಟೇ ಜಾರಿ ನಿರ್ದೇಶನಾಲಯ(ಈ.ಡಿ) ಶಿವಶಂಕರಪ್ಪ ಸಾಹುಕಾರ್, ಬಿವಿ ಗೀತಾ, ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಹಾಗೂ ಬಸವರಾಜ್ ಕನ್ನಾಳೆ ವಿರುದ್ಧ ಪ್ರಾಸಿಕ್ಯೂಷನ್ ದೂರು ದಾಖಲಿಸಿತ್ತು. ಅಲ್ಲದೆ, ಈ ನಾಲ್ವರಿಗೂ ಸಂಬಂಧಿಸಿದ 1.22 ಕೋಟಿ ಮೌಲ್ಯದ ಚರ ಹಾಗೂ ಸ್ಥಿರಾಸ್ತಿಯನ್ನ ಜಪ್ತಿ ಮಾಡಿತ್ತು.

- Advertisement -

Related news

error: Content is protected !!