- Advertisement -
- Advertisement -



ಕೆಲಸಕ್ಕೆ ಹೋಗು ಎಂದ ಪತ್ನಿಯನ್ನೇ ಕತ್ತು ಹಿಸುಕಿ ಕೊಂದ ಪತಿರಾಯ ಪೊಲೀಸರಿಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರ ಗ್ರಾಮದಲ್ಲಿ ನಡೆದಿದೆ.
ನಾಗನೂರ ಗ್ರಾಮದ ಬಸವ್ವ ಹಣಮಂತ ಹಿಡಕಲ್(35) ಗಂಡ ಹಣಮಂತ ಹಿಡಕಲ್ ನಿಂದ ಕೊಲೆಯಾದ ದುದೈವಿಯಾಗಿದ್ದಾಳೆ. ಕಳೆದ ಕೆಲ ದಿನಗಳಿಂದ ಕೆಲಸಕ್ಕೆ ಹೋಗದೆ ಹಣಮಂತ ಮನೆಯಲ್ಲಿ ಇರುತ್ತಿದ್ದ. ಕೆಲಸಕ್ಕೆ ಹೋಗು ಹೀಗೆ ಎಷ್ಟು ದಿನ ಖಾಲಿ ಮನೆಯಲ್ಲಿರ್ತಿಯಾ ಎಂದು ಪ್ರಶ್ನಿಸಿದ್ದಕ್ಕೆ ಪತ್ನಿ ಬಸವ್ವನ ಮೇಲೆ ಕೋಪಗೊಂಡ ಹಣಮಂತ ಪದೇ ಪದೇ ಹೇಳಿದನ್ನೇ ಹೇಳ್ತಿಯಾ ಎಂದು ಸಿಟ್ಟಿಗೆದ್ದು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಹೆಂಡತಿಯನ್ನು ಕೊಲೆ ಮಾಡಿ ತಾನೇ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -








