Monday, June 8, 2026
spot_imgspot_img
spot_imgspot_img

ಪುತ್ತೂರು: ಮರದ ಗೆಲ್ಲು ತಲೆಗೆ ಬಿದ್ದು ವ್ಯಕ್ತಿ ಮೃತ್ಯು

- Advertisement -
- Advertisement -

ಪುತ್ತೂರು: ಮನೆಯ ಹಿತ್ತಲಲ್ಲಿ ಮರ ಕಡಿಯುತ್ತಿದ್ದ ಸಂದರ್ಭ ಮರದ ಗೆಲ್ಲು ತಲೆಗೆ ಬಡಿದು ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ದರ್ಬೆತ್ತಡ್ಕದಲ್ಲಿ ನಡೆದಿದೆ.

ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ದರ್ಬೆತ್ತಡ್ಕದ ನಿವಾಸಿ ಗುರುಪ್ರಸಾದ್(49) ಎಂದು ತಿಳಿದು ಬಂದಿದೆ.

ಗುರುಪ್ರಸಾದ್ ರವರು ತಮ್ಮ ಜಮೀನಿನಲ್ಲಿ ಮರದ ಗೆಲ್ಲನ್ನು ಕಡಿಸುತ್ತಿದ್ದ ವೇಳೆ ಇವರು ಹಗ್ಗದಿಂದ ಮರದ ಗೆಲ್ಲನ್ನು ಕೆಳಗೆ ನಿಂತು ಎಳೆಯುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಗೆಲ್ಲು ಇವರ ಮೈ ಮೇಲೆ ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದ ಇವರನ್ನು ತಕ್ಷಣವೇ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಚಿಕಿತ್ಸೆ ಫಲಕರಿಯಾಗದೆ ಮೃತಪಟ್ಟರು ಎನ್ನಲಾಗಿದೆ.

ಮೃತರ ಪತ್ನಿ ಅಂಗನವಾಡಿಯಲ್ಲಿ ಶಿಕ್ಷಕಿಯಾಗಿದ್ದು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಮೃತದೇಹವು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

- Advertisement -

Related news

error: Content is protected !!