Thursday, June 4, 2026
spot_imgspot_img
spot_imgspot_img

ಖಾಸಗಿಯಾಗಿ ಮೋಡ ಬಿತ್ತನೆ ಮಾಡಲು ಸರ್ಕಾರದ ಅನುಮತಿ

- Advertisement -
- Advertisement -

ರಾಜ್ಯದಲ್ಲಿ ಕೆಲವೆಡೆ ಉತ್ತಮ ಮುಂಗಾರು ಮಳೆಯಾಗುತ್ತಿದ್ದರೂ, ಇನ್ನು ಕೆಲವು ಜಿಲ್ಲೆಯಲ್ಲಿ ತೀವ್ರವಾಗಿ ಮಳೆ ಕೊರತೆಯಾಗಿದೆ. ಹೀಗಾಗಿ ರಾಣೀಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ನೇತೃತ್ವದ ತಂಡ ಖಾಸಗಿಯಾಗಿ ಹಾವೇರಿ ಜಿಲ್ಲೆಯಲ್ಲಿ ಮೋಡ ಬಿತ್ತನೆ ಮಾಡಲು ಮುಂದಾಗಿದೆ.
ಭಾರತೀಯ ಹವಮಾನ ಇಲಾಖೆ ಮಳೆ ಕೊರೆತೆ ಇದೆ ಎಂದು ಹೇಳಿದೆ. ಮೋಡ ಬಿತ್ತನೆಯಿಂದ ಮಳೆಯಾಗಲಿದೆ ಎಂದ ವಿಜ್ಞಾನಿಗಳೇ ಹೇಳುತ್ತಿದ್ದು ಜಿಲ್ಲೆಯ ರೈತರಿಗಾಗಿ ನಾವು ಖಾಸಗಿಯಾಗಿ ಮೋಡ ಬಿತ್ತನೆಯನ್ನ ಮಾಡುತ್ತೇವೆ ಎಂದು ಪ್ರಕಾಶ್ ಕೋಳಿವಾಡ ಹೇಳಿದ್ದಾರೆ.

ಪ್ರಕಾಶ್ ಕೋಳಿವಾಡರವರಿಗೆ ಸೇರಿದ ಪಿಕೆಕೆ ಎಂಬ ಎನ್‌ಜಿಓ ಮೋಡ ಬಿತ್ತನೆಗೆ ಜಿಲ್ಲಾಧಿಕಾರಿ ಮತ್ತು ಕಂದಾಯ ಇಲಾಖೆಯಿಂದ ಅನುಮತಿಪಡೆದುಕೊಂಡಿದ್ದು, ಕೇಂದ್ರ ವಿಮಾನಯಾನ ಇಲಾಖೆಯ ಅನುಮತಿ ಪಡೆದುಕೊಳ್ಳಲು ಈ ತಂಡ ಟೀಂ ರಾಜ್ಯ ರಾಜಧಾನಿಗೆ ತೆರಳಿದ್ದು, ದೆಹಲಿಯಲ್ಲಿ ಅನುಮತಿ ದೊರೆತ ಬಳಿಕ ಹಾವೇರಿಯಲ್ಲಿ ಮೋಡ ಬಿತ್ತನೆ, ನಡೆಯಲಿದೆ.

- Advertisement -

Related news

error: Content is protected !!