Sunday, June 29, 2025
spot_imgspot_img
spot_imgspot_img

ಡಾಕ್ಟರ್ ಭೇಟಿ ಮಾಡಲು ಕರೆ ಮಾಡಿ 1.5 ಲಕ್ಷ ಕಳೆದುಕೊಂಡ ಮಹಿಳೆ..!

- Advertisement -
- Advertisement -

ಡಾಕ್ಟರ್ ಭೇಟಿ ಮಾಡಲು ಸಮಯ ಕೇಳಲು ಆಸ್ಪತ್ರೆಗೆ ಕರೆ ಮಾಡಿದ ಮಹಿಳೆ ಆನ್ ಲೈನ್ ವಂಚನೆಗೆ ಸಿಲುಕಿ 1.5 ಲಕ್ಷ ರೂ. ಕಳೆದುಕೊಂಡ ಘಟನೆ ಮುಂಬೈನಲ್ಲಿ ನಡೆದಿದೆ.

ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಚೆಂಬೂರಿನ ಆಸ್ಪತ್ರೆಯಲ್ಲಿ ವೈದ್ಯರನ್ನು ಭೇಟಿ ಮಾಡಲು ಸಮಯ ನಿಗದಿಪಡಿಸಬೇಕಾಗಿತ್ತು. ಆನ್‌ಲೈನ್‌ನಲ್ಲಿ ಸಿಕ್ಕ ಮಾಹಿತಿ ನಂಬಿ, ಅದರಲ್ಲಿ ನೀಡಿದ ಸಂಖ್ಯೆಗೆ ಕರೆ ಮಾಡಿದ್ದಾರೆ. ಆದರೆ ಆ ಸಂಖ್ಯೆ ಆಸ್ಪತ್ರೆಯದ್ದು ಆಗಿರದೇ ಸೈಬರ್ ವಂಚಕ ನೀಡಿದ್ದ ನಕಲಿ ನಂಬರ್ ಆಗಿತ್ತು.

ಮಹಿಳೆ ಕರೆ ಮಾಡಿದ ಕೆಲವೇ ಗಂಟೆಗಳಲ್ಲಿ ಹಂತ ಹಂತವಾಗಿ ಆಕೆಯ ಖಾತೆಯಿಂದ ಸುಮಾರು 1.5 ಲಕ್ಷ ರೂ. ನಾಪತ್ತೆಯಾಗಿದೆ. ಇದರಿಂದ ಕಂಗಲಾದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

- Advertisement -

Related news

error: Content is protected !!