Tuesday, April 30, 2024
spot_imgspot_img
spot_imgspot_img

ಸಿನಿಮಾ ಮಂದಿರ ತೆರೆಯಲು ಕೇಂದ್ರ ಗೃಹಸಚಿವಾಲಯ ಅನುಮತಿ

- Advertisement -G L Acharya panikkar
- Advertisement -

ಕೊರೋನಾ ಭೀತಿಯಿಂದಾಗಿ ಲಾಕ್​ಡೌನ್​ ಆರಂಭವಾದ ಕೂಡಲೇ ಮಲ್ಟಿಪ್ಲೆಕ್ಸ್​ ಹಾಗೂ ಚಿತ್ರಮಂದಿರಗಳನ್ನು ಮುಚ್ಚಿಸಲಾಗಿತ್ತು. ಕಳೆದ ಆರು ತಿಂಗಳಿನಿಂದ ಬಂದ್​ ಆಗಿದ್ದ ಸಿನಿಮಾ ಮಂದಿರ ತೆರೆಯಲು ಕೇಂದ್ರ ಗೃಹಸಚಿವಾಲಯ ಅನುಮತಿ ನೀಡಿದ್ದು, ಸಿನಿಪ್ರಿಯರಲ್ಲಿ ಸಂತಸ ಉಂಟು ಮಾಡಿದೆ.

ಕೊರೋನಾ ಲಾಕ್​ಡೌನ್​ ಸಡಿಲಿಕೆ ಅನ್​ಲಾಕ್ ​5 ಮೂಲಕ ಇದನ್ನು ತೆರೆಯಲಾಗುತ್ತಿಲ್ಲ. ಬದಲಾಗಿ ಹಲವು ಮಾರ್ಗಸೂಚಿಗಳ ಮೇಲೆ ಈ ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಾರ್ಗಸೂಚಿ ಬಿಡುಗಡೆ ಮಾಡಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಸಿನಿಮಾ ಮಂದಿರ, ಮಲ್ಟಿಪ್ಲೆಕ್ಸ್​ಗಳು ಕಾರ್ಯರಂಭಕ್ಕೆ ಅವಕಾಶ ನೀಡಲಾಗಿದೆ. ಇದಿರಂದಾಗಿ ಮಲ್ಟಿಪ್ಲೆಕ್ಸ್​ ಹಾಗೂ ಸಿನಿಮಾ ಮಾಲೀಕರು ಖುಷಿಯಿಂದ ಸಿನಿಮಾ ಪ್ರದರ್ಶನಕ್ಕೆ ಸಜ್ಜಾಗುತ್ತಿದ್ದಾರೆ. 

ಸಿನಿಮಾ ಮಂದಿರಗಳಲ್ಲಿ ಶೇ 50 ರಷ್ಟು ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ಕಲ್ಪಿಸಬೇಕು ಎಂದು ಕೇಂದ್ರ ಗೃಹಸಚಿವಾಲ ಹೊರಡಿಸಿರುವ ಪ್ರಕಟಣೆ ತಿಳಿಸಿದೆ. ಅಕ್ಟೋಬರ್​ 15ರಿಂದ ಕಂಟೈನ್ಮೆಟ್ ಪ್ರದೇಶ ಹೊರತು ಪಡಿಸಿ ಬೇರೆ ಕಡೆಗಳಲ್ಲಿ ಚಿತ್ರ ಮಂದಿರಗಳನ್ನು ತೆರೆಯಬಹುದಾಗಿದೆ. ಸಾಲು ಸಾಲು ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ಹೊಸ ಸಿನಿಮಾಗಳ ಜೊತೆಗೆ ಈಗ ಈ ಹಿಂದೆ ಲಾಕ್​ಡೌನ್​ ಆರಂಭದಲ್ಲಿ ರಿಲೀಸ್ ಆಗಿದ್ದ ಕೆಲವು ಸಿನಿಮಾಗಳೂ ಈಗ ಮತ್ತೆ ರಿಲೀಸ್​ ಆಗಲಿವೆ.

- Advertisement -

Related news

error: Content is protected !!