Monday, June 15, 2026
spot_imgspot_img
spot_imgspot_img

ಮಂಗಳೂರು: ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು

- Advertisement -
- Advertisement -

ಮಂಗಳೂರು: ನೀರು ತುಂಬಿದ್ದ ಹೊಂಡಕ್ಕೆ ಈಜಲು ತೆರಳಿದ್ದ ಇಬ್ಬರು ಯುವಕರು ಮುಳುಗಿ ನಾಪತ್ತೆಯಾದ ಘಟನೆ ಅಳಪೆ ಪಡ್ಪು ಬಳಿ ನಡೆದಿದೆ.

ಅಳಪೆಯ ಸ್ಥಳೀಯ ನಿವಾಸಿಗಳಾದ ವರುಣ್ (26) ಮತ್ತು ವೀಕ್ಷಿತ್ (26) ನೀರುಪಾಲಾದವರು ಎಂದು ತಿಳಿದುಬಂದಿದೆ.

ಅಳಪೆಯ ಪಡ್ಪು ಬಳಿ ಇರುವ ನೀರು ತುಂಬಿರುವ ಕೆರೆಯಂತಿರುವ ಹೊಂಡದಲ್ಲಿ ವರುಣ್, ವೀಕ್ಷಿತ್ ಸೇರಿದಂತೆ ಆರು ಮಂದಿ ಯುವಕರು ತೆರಳಿದ್ದರು. ಇವರೆಲ್ಲ ನೀರಿಗಿಳಿದಿದ್ದರು. ಈ ಪೈಕಿ ಇಬ್ಬರು ನಾಪತ್ತೆಯಾಗಿದ್ದಾರೆ. ಅವರು ನೀರುಪಾಲಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಈಗಾಗಲೇ ಓರ್ವನ ಮೃತದೇಹ ಸಿಕ್ಕಿದ್ದು, ಇನ್ನೊಬ್ಬನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದ್ದು, ಶೋಧ ಕಾರ್ಯ ನಡೆಸುತ್ತಿದೆ.

- Advertisement -

Related news

error: Content is protected !!