Sunday, June 21, 2026
spot_imgspot_img
spot_imgspot_img

ಹಿರಿಯ ವೈದ್ಯಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಕಿರಿಯ ವೈದ್ಯೆ ಆತ್ಮಹತ್ಯೆ

- Advertisement -
- Advertisement -

ಹಿರಿಯ ವೈದ್ಯಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಕಿರಿಯ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭೋಪಾಲ್‌ನ ಗಾಂಧಿ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ.

36 ಗಂಟೆಗಳ ಕಾಲ ನಿರಂತರ ಕೆಲಸ ಮಾಡುವಂತೆ ಇಲಾಖೆಯ ಮೂವರು ಹಿರಿಯ ಮಹಿಳಾ ವೈದ್ಯರು ಕಿರಿಯ ವೈದ್ಯೆ ಬಾಲ ಸರಸ್ವತಿಗೆ ಹಿಂಸೆ ನೀಡುತ್ತಿದ್ದರಂತೆ. ಸೋಮವಾರ ಮನೆಯ ಪೂಜಾ ಕೋಣೆಯಲ್ಲಿ ಆಕೆಯ ಶವ ಪತ್ತೆಯಾದಾಗ ಘಟನೆ ಬೆಳಕಿಗೆ ಬಂದಿದೆ.

ಮೃತ ಸರಸ್ವತಿ ತಮ್ಮ ಇಲಾಖೆಯ ಮೂವರು ಹಿರಿಯ ಮಹಿಳಾ ವೈದ್ಯರಿಂದ ಅಪಾರ ಒತ್ತಡ ಮತ್ತು ನಿಂದನೆಗಳನ್ನು ಸಹಿಸಿಕೊಳ್ಳುತ್ತಿದ್ದರು ಎಂದು ಅವರ ಪತಿ ಆರೋಪಿಸಿದ್ದಾರೆ. ತನ್ನ ಕಿರಿಯರ ಮುಂದೆ ತನ್ನನ್ನು ಅವಮಾನಿಸಿ, ಸೋಮಾರಿ ಎಂಬ ಹಣೆಪಟ್ಟಿ ಕಟ್ಟಲಾಗಿದೆ ಎಂದು ಆಕೆಯ ಪತಿ ಜೈ ವರ್ಧನ್ ಚೌಧರಿ ದೂರಿದ್ದಾರೆ. ಆರೋಪಿ ಹಿರಿಯ ವೈದ್ಯರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

- Advertisement -

Related news

error: Content is protected !!