Friday, June 27, 2025
spot_imgspot_img
spot_imgspot_img

ಪುತ್ತೂರು: ಪತ್ನಿಗೆ ಅವಾಚ್ಯವಾಗಿ ಬೈದು, ಚೂರಿ ಇರಿದು ಜೀವ ಬೆದರಿಕೆ; ಪ್ರಕರಣ ದಾಖಲು

- Advertisement -
- Advertisement -

ಪುತ್ತೂರು: ಪತ್ನಿಗೆ ಅವಾಚ್ಯವಾಗಿ ಬೈದು, ಚೂರಿ ಇರಿದು ಜೀವ ಬೆದರಿಕೆಯೊಡ್ಡಿದ ಘಟನೆ ಪುತ್ತೂರು ನಗರ ಠಾಣಾ ವ್ಯಾಪ್ತಿಯ ಕಸಬಾ ಎಂಬಲ್ಲಿ ನಡೆದಿದ್ದು, ಹಲ್ಲೆಗೊಳಗಾದ ಮಹಿಳೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹಲ್ಲೆಗೊಳಗಾದ ಮಹಿಳೆಗೆ 6 ವರ್ಷದ ಹಿಂದೆ ಮದುವೆಯಾಗಿದ್ದು, ಮದುವೆಯಾಗಿ 2-3 ವರ್ಷಗಳಿಂದ ಗಂಡ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ದೂರು ನೀಡಲಾಗಿತ್ತು. ಪೊಲೀಸ್‌ ಠಾಣೆಯಲ್ಲಿ ಮುಚ್ಚಳಿಕೆ ಬರೆಸಿದ್ದರೂ ಆರೋಪಿ ತನ್ನ ಚಾಳಿ ಬಿಡದೇ ತೊಂದರೆ ಕೊಡುವುದನ್ನು ಮುಂದುವರಿಸಿದ್ದ.

ಗಂಡನ ಕಿರುಕುಳ ಬೇಸತ್ತು ಮಹಿಳೆ ತವರು ಮನೆ ಸೇರಿದ್ದರು. ಅಲ್ಲಿಗೆ ಬಂದ ಆರೋಪಿ ಅವ್ಯಾಚವಾಗಿ ಬೈದು ಆತನ ಕೈಯಲ್ಲಿದ್ದ ಚೂರಿಯಿಂದ ಮಹಿಳೆಯ ಎಡಕೈ ಕೋಲು ಕೈಗೆ ತಿವಿದು ಜೀವ ಬೆದರಿಕೆಯೊಡ್ಡಿದ್ದಾನೆ. ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದು, ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!