- Advertisement -
- Advertisement -



ಕಲ್ಲಡ್ಕ: ವಿಶ್ವ ಹಿಂದು ಪರಿಷತ್ ಬಜರಂಗದಳ ಮಾತೃ ಶಕ್ತಿ, ದುರ್ಗಾ ವಾಹಿನಿ ಕಲ್ಲಡ್ಕ ಪ್ರಖಂಡ ಇದರ ವತಿಯಿಂದ 1947 ಅಗಸ್ಟ್ 14ರ ಮಧ್ಯ ರಾತ್ರಿ ಇಬ್ಬಾಗವಾದ ದೇಶವನ್ನು ಮತ್ತೆ ಒಂದುಗೂಡಿಸುವ ಸಂಕಲ್ಪದೊಂದಿಗೆ ಆ.14ರಂದು ಸೋಮವಾರ ’ಅಖಂಡ ಭಾರತ ಸಂಕಲ್ಪ ದಿನ’ ನಡೆಯಲಿದೆ.

ಸಂಜೆ ಗಂಟೆ 5 ಕ್ಕೆ “ಬೃಹತ್ ಪಂಜಿನ ಮೆರವಣಿಗೆ” ಶ್ರೀ ರಾಮ ವಿದ್ಯಾ ಕೇಂದ್ರ ಕಲ್ಲಡ್ಕದಿಂದ ಕಲ್ಲಡ್ಕದ ರಾಜ ರಸ್ತೆಯಲ್ಲಿ ಸಾಗಲಿದೆ. ಸಂಜೆ ಗಂಟೆ 6ಕ್ಕೆ ಕಲ್ಲಡ್ಕ ಶ್ರೀ ರಾಮ ಭಜನಾ ಮಂದಿರ ಮಾಧವ ಸಭಾಂಗಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
ಸಮಾರೋಪ ಸಮಾರಂಭದಲ್ಲಿ ಮಂಗಳೂರು ಅಗ್ರಜ ಬ್ಯುಲ್ಡರ್ಸ್ & ಡೆವಲಪರ್ಸ್‌ನ ಸಂದೇಶ್ ಕುಮಾರ್ ಶೆಟ್ಟಿ , ಅಧ್ಯಕ್ಷತೆ ವಹಿಸಲಿದ್ದಾರೆ. ಭರತ್ ಕುಮ್ಡೇಲು ಸಂಯೋಜಕರು, ಬಜರಂಗದಳ, ಪುತ್ತೂರು ಜಿಲ್ಲೆ ಉಪಸ್ಥಿತರಿರುವರು. ಬೆಂಗಳೂರು ಯುವ ವಾಗ್ಮಿ ಕುಮಾರಿ ಹಾರಿಕಾ ಮಂಜುನಾಥ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
Fb: glacharya
- Advertisement -








