Sunday, June 29, 2025
spot_imgspot_img
spot_imgspot_img

ಬಾಹ್ಯಾಕಾಶ ನೌಕೆಗೆ ಭಾರತದ ಕಲ್ಪನಾ ಚಾವ್ಲಾ ಹೆಸರಿಟ್ಟ ಅಮೆರಿಕಾ

- Advertisement -
- Advertisement -

ವಾಷಿಂಗ್ಟನ್​​: ಮೊದಲ ಭಾರತೀಯ ಮಹಿಳಾ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಹೆಸರನ್ನ ಇಡಲಾಗಿದ್ದ ಅಮೆರಿಕಾದ​​ ಬಾಹ್ಯಾಕಾಶ ನೌಕೆ ನಭಕ್ಕೆ ಹಾರಿದೆ. ನಾಸಾದ ವಾಲಾಪ್​ ಫ್ಲೈಟ್​ ಫೆಸಿಲಿಟಿಯಿಂದ ಸ್ಪೇಸ್​​ಕ್ರಾಫ್ಟ್​ ಉಡಾವಣೆಯಾಗಿದೆ. ಈ ನೌಕೆ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸುಮಾರು 3,629 ಕೆ.ಜಿ ತೂಕದ ಸರಕು ಸಾಮಗ್ರಿಗಳನ್ನ ಹೊತ್ತು ಸಾಗಿದೆ.


ನಾರ್ತಾರ್ಪ್​​​​ ಗ್ರೂಮ್ಯಾನ್ ಎಂಬ ಅಮೆರಿಕಾದ ಗ್ಲೋಬಲ್ ಏರೋಸ್ಪೇಸ್​​ ಮತ್ತು ರಕ್ಷಣಾ ತಂತ್ರಜ್ಞಾನ ಸಂಸ್ಥೆ, ಇತ್ತೀಚೆಗೆ ತನ್ನ ಈ ಕಾರ್ಗೋ ನೌಕೆಗೆ ಕಲ್ಪನಾ ಚಾವ್ಲಾ ಅವರ ಹೆಸರನ್ನ ಇಟ್ಟಿರುವುದಾಗಿ ಘೋಷಿಸಿತ್ತು. ನಾಸಾದ ಮೊದಲ ಭಾರತೀಯ ಮೂಲದ ಗಗನಯಾತ್ರಿ ಎಂಬ ಇತಿಹಾಸ ಬರೆದಿದ್ದ ಎಸ್​​.ಎಸ್​​ ಕಲ್ಪನಾ ಚಾವ್ಲಾ ಅವರನ್ನ ನಾವು ಗೌರವಿಸುತ್ತಿದ್ದೇವೆ. ಕಲ್ಪನಾ ಅವರ ಕೊಡುಗೆ ಮಾನವ ಬಾಹ್ಯಾಕಾಶಯಾನದ ಮೇಲೆ ಶಾಶ್ವತ ಪರಿಣಾಮ ಬೀರಿದೆ ಎಂದು ಕಂಪನಿ ಟ್ವೀಟ್ ಮಾಡಿದೆ.


ಬಾಹ್ಯಾಕಾಶಕ್ಕೆ ತೆರಳಿದ ಭಾರತ ಮೂಲದ ಮೊದಲ ಮಹಿಳೆ ಎಂಬ ಕಾರಣದಿಂದ ಅವರ ಹೆಸರನ್ನ ನೌಕೆಗೆ ಇಡಲು ತೀರ್ಮಾನಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

- Advertisement -

Related news

error: Content is protected !!