Tuesday, June 16, 2026
spot_imgspot_img
spot_imgspot_img

ಕನ್ಯಾನ: (ಸೆ.19) ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ (ರಿ.)ನೀರ್ಪಾಜೆ ಇದರ 37 ನೇ ವರ್ಷದ ಶ್ರೀ ವಿದ್ಯಾಗಣೇಶೋತ್ಸವ

- Advertisement -
- Advertisement -

ಕನ್ಯಾನ: ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ (ರಿ.) ನೀರ್ಪಾಜೆ ಇದರ 37 ನೇ ವರ್ಷದ ಶ್ರೀ ವಿದ್ಯಾಗಣೇಶೋತ್ಸವವು ಸೆ.19ರಂದು ಕನ್ಯಾನದ ನೀರ್ಪಾಜೆ ಶಾಲೆಯಲ್ಲಿ ನಡೆಯಲಿದೆ.

ಬೆಳಗ್ಗೆ ಗಂಟೆ 7.30ಕ್ಕೆ ಶ್ರೀ ವಿದ್ಯಾಗಣಪತಿ ದೇವರ ಪ್ರಾಣ ಪ್ರತಿಷ್ಠೆ ನಡೆದ ಬಳಿಕ 16 ಕಾಯಿಯ ಗಣಪತಿ ಹವನ ಪ್ರಾರಂಭ ಮತ್ತು ಆಟೋಟ ಸ್ಪರ್ಧೆ ಪ್ರಾರಂಭಗೊಳ್ಳಲಿದೆ. ಬಳಿಕ ಭಜನಾ ಕಾರ್ಯಕ್ರಮ ಮಂಗಳಾರತಿ, ಗಣಪತಿ ಹವನ, ಪೂರ್ಣಾಹುತಿ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಮಧ್ಯಾಹ್ನ 1.00 ಗಂಟೆಯಿಂದ ಜ್ಯೂನಿಯರ್ ಹಾಗೂ ಸೀನಿಯರ್ ವಿಭಾಗದ ಕಬಡ್ಡಿ ಪಂದ್ಯಾಟ, ಸಂಜೆ ಗಂಟೆ 5.30ರಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಪ್ರಾರಂಭ, ಸಾರ್ವಜನಿಕ ಶ್ರೀ ಸತ್ಯಗಣಪತಿ ದೇವರ ಪೂಜೆ ಬಳಿಕ ಸಭಾ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ.

ರಾತ್ರಿ 9.00 ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿತರಣೆ ನಂತರ ಮರ್ತನಾಡಿ ಹೊಳೆಯ ವಿಪುಲ ಪುಣ್ಯ ಜಲದಲ್ಲಿ ಶ್ರೀ ವಿದ್ಯಾಗಣಪತಿ ದೇವರ ವಿಸರ್ಜನೆ ನಡೆಯಲಿದೆ.

- Advertisement -

Related news

error: Content is protected !!