Sunday, August 2, 2026
spot_imgspot_img
spot_imgspot_img

ಮನೆಯಲ್ಲಿ ವಿಷಕಾರಿ ಹಾವುಗಳನ್ನು ಅಕ್ರಮವಾಗಿರಿಸಿ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯ ಬಂಧನ..!!

- Advertisement -
- Advertisement -
vtv vitla

ಅಕ್ರಮವಾಗಿ ಅಪರೂಪದ ವಿಷಕಾರಿ ಹಾವುಗಳನ್ನು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಘಟನೆ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.

ಮೈಸೂರು ಸಿಐಡಿ ಅರಣ್ಯ ಸಂಚಾರಿ ದಳ ಸಿಬ್ಬಂದಿ ನೀಡಿದ ಖಚಿತ ಮಾಹಿತಿ ಮೇರೆಗೆ ಆರೋಪಿ ಸಂದೀಪ್ ಅಲಿಯಾಸ್ ದೀಪು ಎಂಬಾತನ ಮನೆಗೆ ದಾಳಿ ನಡೆಸಲಾಗಿದೆ. ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಹಾವುಗಳನ್ನು ರಕ್ಷಣೆ ಮಾಡಿ, ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.

ಮೈಸೂರಿನಲ್ಲಿ ತನ್ನ ಮನೆಯಲ್ಲಿ ಈತ ವಿಷಕಾರಿ ಹಾವುಗಳನ್ನು ಸಾಕುತ್ತಿದ್ದು, ಹಾವುಗಳ ವಿಷವನ್ನು ಮಾರಾಟ ಮಾಡಿ ಲಕ್ಷಾಂತರ ರೂ. ವ್ಯವಹಾರ ನಡೆಸುತ್ತಿದ್ದನು. ಆರೋಪಿ ಬಳಿ ಇದ್ದ 4 ನಾಗರಹಾವು, 4 ಮಣ್ಣುಮುಕ್ಕ ಹಾವು, 2 ಕಟ್ಟಾವು, 1 ತೋಳದ ಹಾವು, 1 ಪಚ್ಚೆ ಹಾವು, 2 ಗರಗಸ ಮಂಡಲ ಹಾವು, 2 ಕೇರೆ ಹಾವು, 1 ನೀರು ಹಾವು, 4 ಪುನುಗು ಬೆಕ್ಕು ಸೇರಿ ಆತನ ಬಳಿಯಿದ್ದ ಹಾವಿನ ವಿಷವನ್ನು ತೆಗೆಯುವ ಯಂತ್ರವನ್ನು ಕೂಡ ವಶಕ್ಕೆ ಪಡೆದು, ಆರೋಪಿ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

- Advertisement -

Related news

error: Content is protected !!