Sunday, October 18, 2026
spot_imgspot_img
spot_imgspot_img

ಟ್ರಂಪ್ ಗುಣಮುಖರಾಗಲು ಮರಳು ಕಲಾಕೃತಿಯ ಮೂಲಕ ವಿಭಿನ್ನ ಹಾರೈಕೆ

- Advertisement -
- Advertisement -

ಅಮೆರಿಕಾ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​ ಹಾಗೂ ಅವರ ಪತ್ನಿ ಮೆಲಾನಿಯಾ ಟ್ರಂಪ್​​ ಕೊರೊನಾ ಸೋಂಕಿನಿಂದ ಶೀಘ್ರ ಗುಣಮುಖರಾಗುವಂತೆ ಕೋರಿ ಭಾರತದ ಖ್ಯಾತ ಮರಳು ಕಲಾವಿದ ಸುದರ್ಶನ್​ ಪಟ್ನಾಯಕ್​ ವಿಭಿನ್ನವಾಗಿ ಶುಭ ಹಾರೈಸಿದ್ದಾರೆ.

ಅಕ್ಟೋಬರ್​ 2 ರಂದು ಡೊನಾಲ್ಡ್​ ಟ್ರಂಪ್​ ಹಾಗೂ ಮಲೆನಿಯಾ​ಗೆ ಕೊರೊನಾ ಸೋಂಕು ತಗುಲಿರುವುದಾಗಿ ಟ್ವೀಟ್​​ ಮಾಡುವ ಮೂಲಕ ಖಚಿತಪಡಿಸಿದ್ದರು.

ಒಡಿಶಾದ ಪುರಿ ಬೀಚ್​​ನಲ್ಲಿ ಟ್ರಂಪ್​ ಹಾಗೂ ಮಲೆನಿಯಾ​ ಜೋಡಿಯ ಸುಂದರ ಮರಳಿನ ಕಲಾಕೃತಿಯನ್ನ ಸುದರ್ಶನ್ ರಚಿಸಿದ್ದಾರೆ. ಕಲಾಕೃತಿಯ ಹಿಂಭಾಗದಲ್ಲಿ ಅಮೆರಿಕಾ ಧ್ವಜವನ್ನು , ಕೆಳಭಾಗದಲ್ಲಿ​ ಗೆಟ್​​ ವೆಲ್​ ಸೂನ್​ ಎಂಬ ಬರಹವನ್ನ ಕಾಣಬಹುದು. ಕಲಾಕೃತಿಯ ಫೋಟೋವನ್ನು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿರುವ ಸುದರ್ಶನ್,​​ ಟ್ರಂಪ್​ ಹಾಗೂ ಅವರ ಕುಟುಂಬ ಸದಸ್ಯರನ್ನು ಟ್ಯಾಗ್​ ಮಾಡಿ ಶೀಘ್ರ ಗುಣಮುಖರಾಗಿ ಎಂದು ಬರೆದುಕೊಂಡಿದ್ದಾರೆ.

- Advertisement -

Related news

error: Content is protected !!