Monday, June 22, 2026
spot_imgspot_img
spot_imgspot_img

ವಿವಾಹವಾಗುವುದಾಗಿ ನಂಬಿಸಿ ಯುವತಿಗೆ ಲೈಂಗಿಕ ಕಿರುಕುಳ; ಬಿಗ್‌ಬಾಸ್‌ ಸ್ಪರ್ಧಿ ಶಿಯಾಝ್ ಕರೀಂ ಬಂಧನ

- Advertisement -
- Advertisement -

ಮಾಡೆಲ್ ಹಾಗೂ ಬಿಗ್‌ಬಾಸ್‌ ಸ್ಪರ್ಧಿ ಶಿಯಾಝ್ ಕರೀಂ ಅವರನ್ನು ಚೆನ್ನೈ ಪೊಲೀಸರು ವಿಮಾನ ನಿಲ್ದಾಣದಲ್ಲಿ ಕಾಸರಗೋಡು ಪೊಲೀಸರು ಚೆನ್ನೈ ಬಂಧಿಸಿದ್ದಾರೆ. ಶಿಯಾಝ್ ಕರೀಂ ಮೇಲೆ ಮದುವೆಯಾಗುವುದಾಗಿ ಭರವಸೆ ನೀಡಿ ಹಲವು ಕಡೆಗಳಿಗೆ ಕರೆದೊಯ್ದು ಕಿರುಕುಳ ನೀಡಿದ್ದು, 11 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಅವರನ್ನು ಚೆನ್ನೈನಲ್ಲಿ ಬಂಧಿಸಲಾಗಿದೆ.

ವಿದೇಶದಿಂದ ಬಂದಿದ್ದ ಶಿಯಾಝ್ ಕರೀಂ ಅವರನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಯುವತಿಯ ದೂರಿನ ಮೇರೆಗೆ ಕಾಸರಗೋಡು ಚಂತೇರಾ ಪೊಲೀಸರು ಶಿಯಾಝ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಪೊಲೀಸರು ಆತನನ್ನು ಬಂಧಿಸಲು ಲುಕ್‌ಔಟ್‌ ನೋಟಿಸ್‌ ಹೊರಡಿಸಿದ್ದರು.

ಎರ್ನಾಕುಲಂನಲ್ಲಿ ತನ್ನದೇ ಆದ ಜಿಮ್ನಾಷಿಯಂ ನಡೆಸುತ್ತಿರುವ ಶಿಯಾಝ್ ಜಿಮ್ ಟ್ರೈನರ್ ಗಾಗಿ ಜಾಹೀರಾತು ನೀಡಿದ್ದರು. ಈ ಜಾಹೀರಾತಿನ ಮೂಲಕವೇ 32 ವರ್ಷದ ಜಿಮ್ನಾಷಿಯಂ ತರಬೇತುದಾರ ಆರೋಪಿಯನ್ನು ಸಂಪರ್ಕಿಸಿದ್ದ. ದೂರಿನ ಪ್ರಕಾರ ಪರಸ್ಪರ ಪರಿಚಯ ಮಾಡಿಕೊಂಡು ಶಿಯಾಝ್ ಮಹಿಳೆಗೆ ಮದುವೆಯಾಗುವುದಾಗಿ ಭರವಸೆ ನೀಡಿದ ಹಲವು ಕಡೆಗಳಿಗೆ ಕರೆದೊಯ್ದು ಕಿರುಕುಳ ನೀಡಿರುವುದಾಗಿ ಎಂದು ದೂರುದಾರರು ಆರೋಪಿಸಿದ್ದಾರೆ.

ಈ ನಡುವೆ ಬೇರೆ ಯುವತಿಯ ಜೊತೆ ವಿವಾಹ ನಿಶ್ಚಯ ಕುರಿತು ಶಿಯಾಝ್ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದು, ವಿವಾಹ ಭರವಸೆ ನೀಡಿ ತನ್ನನ್ನು ವಂಚಿಸಿರುವುದಾಗಿ ಆರೋಪಿಸಿ ಪೊಲೀಸರಿಗೆ ದೂರು ಲಭಿಸಿತ್ತು.

- Advertisement -

Related news

error: Content is protected !!