Friday, June 19, 2026
spot_imgspot_img
spot_imgspot_img

ಬಂಟ್ವಾಳ: ದ್ವಿಚಕ್ರವಾಹನದಲ್ಲಿ ಇರಿಸಲಾಗಿದ್ದ ಹಣ ಕಳವು

- Advertisement -
- Advertisement -

ಬಂಟ್ವಾಳ : ದ್ವಿಚಕ್ರವಾಹನದಲ್ಲಿ ಇರಿಸಲಾಗಿದ್ದ 1ಲಕ್ಷ ರೂ.ನಗದು ಕಳವಾದ ಘಟನೆ ಬಿ.ಸಿ.ರೋಡಿನಲ್ಲಿ ನಡೆದಿದೆ.

ನರಿಕೊಂಬು ನಿವಾಸಿ ಪ್ರಕಾಶ್ ಕೋಡಿಮಜಲು ಎಂಬವರು ರೂ.1.40 ಲಕ್ಷ ಹಣವನ್ನು ಬ್ಯಾಂಕಿನಿಂದ ಡ್ರಾ ಮಾಡಿ ಬಳಿಕ ಬಿಸಿರೋಡಿನ ಮಿನಿವಿಧಾನ ಸೌಧದ ಕಚೇರಿಯ ಮುಂಭಾಗದಲ್ಲಿ ಇರಿಸಲಾಗಿದ್ದ ದ್ವಿಚಕ್ರ ವಾಹನದ ಸೀಟಿನಡಿ ಇರುವ ಬಾಕ್ಸ್ ನಲ್ಲಿ ಇರಿಸಿದ್ದರು. ಬಳಿಕ ಬೇರೆಬೇರೆ ಕೆಲಸ ನಿಮಿತ್ತ ಅಲ್ಲಿಂದ ತೆರಳಿದ್ದು, ಬಳಿಕ ಬಂದು ಸೀಟು ಲಾಕ್ ತೆರೆದಾಗ ಅದರೊಳಗೆ ಇರಿಸಲಾಗಿದ್ದ 1.40 ಲಕ್ಷದಲ್ಲಿ 40 ಸಾವಿರ ಮಾತ್ರ ಇದ್ದು ಉಳಿದ 1ಲಕ್ಷ ಹಣ ಕಳವಾಗಿದೆ .ಘಟನೆ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

- Advertisement -

Related news

error: Content is protected !!