Saturday, June 28, 2025
spot_imgspot_img
spot_imgspot_img

ಪೋಷಕರು ಉಡುಗೊರೆಯಾಗಿ ನೀಡಿದ್ದ ಕಾರಿನಲ್ಲಿ ಅಪಘಾತ: ಇಬ್ಬರು ಸಾವು

- Advertisement -
- Advertisement -

ಪೋಷಕರು ಉಡುಗೊರೆಯಾಗಿ ನೀಡಿದ್ದ ಕಾರಿನಲ್ಲಿ ಸುತ್ತಾಡಲು ತೆರಳಿದ್ದ ಬಾಲಕ ಹಾಗೂ ಆತನ ಗೆಳೆಯ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

17 ವರ್ಷದ ಬಾಲಕ ತನ್ನ ಗೆಳೆಯನ ಜೊತೆ ವ್ಹೀಲಿಂಗ್ ಮಾಡುವ ವೇಳೆ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದ್ದು, ಉಲ್ಲಾಸ್ ನಗರ- ಅಂಬರ್‌ ನಾಥ್ ರಸ್ತೆಯಲ್ಲಿ ಘಟನೆ ನಡೆದಿದೆ . ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಪರಿಣಾಮ ಇಬ್ಬರು ಬಾಲಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರಿಬ್ಬರು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

- Advertisement -

Related news

error: Content is protected !!