Monday, June 15, 2026
spot_imgspot_img
spot_imgspot_img

ವಿಟ್ಲ: ಅಪರಾಧ ಕೃತ್ಯಗಳಲ್ಲಿ ಗುರುತಿಸಿಕೊಂಡಿದ್ದ ಆಟೋ ಚಾಲಕನ ಮೇಲೆ ಹಲ್ಲೆ; ಪೊಲೀಸ್ ವಶಕ್ಕೆ

- Advertisement -
- Advertisement -

ವಿಟ್ಲ: ಆಟೋ ಚಾಲಕನನ್ನು ಹಿಂಬಾಲಿಸಿ ಯುವಕರ ತಂಡವೊಂದು ಹಲ್ಲೆ ನಡೆಸಿದ ಘಟನೆ ವಿಟ್ಲ-ಸಾಲೆತ್ತೂರು ರಸ್ತೆಯ ಕಡಂಬು ಎಂಬಲ್ಲಿ ನಡೆದಿದೆ.

ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಮಾದಕದ್ರವ್ಯ ಪ್ರಕರಣ ಸೇರಿದಂತೆ ಇನ್ನಿತರ ಅಪರಾಧ ಕೃತ್ಯಗಳಲ್ಲಿ ಗುರುತಿಸಿಕೊಂಡಿದ್ದ ಸಾಲೆತ್ತೂರು ಮೆದು ಸಿದ್ದೀಕ್ ಎಂಬಾತ ಆಟೋ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಬೆನ್ನಟ್ಟಿ ಬಂದ ತಂಡವೊಂದು ಆಟೋ ತಡೆದು ಚಾಲಕ ಸಿದ್ದೀಕ್ ಮೇಲೆ ಹಲ್ಲೆ ನಡೆಸಿ, ಆಟೋವನ್ನು ಜಖಂಗೊಳಿಸಿದ್ದಾರೆ. ಬಳಿಕ ಸಿದ್ದಿಕ್ ಎಂಬಾತನನ್ನು ಪೊಲೀಸ್ ವಶಕ್ಕೆ ನೀಡಿದ್ದಾರೆ. ಯಾವುದೋ ಧ್ವೇಷದಲ್ಲಿ ಹತ್ತಕ್ಕೂ ಹೆಚ್ಚು ಜನರ ತಂಡ ಈ ಕೃತ್ಯ ಎಸಗಿದೆ ಎಂಬ ಮಾಹಿತಿ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

- Advertisement -

Related news

error: Content is protected !!