- Advertisement -
- Advertisement -
ಲಕ್ನೋ: ಹತ್ರಾಸ್ ಅತ್ಯಾಚಾರ ಪ್ರಕರಣ ದೇಶಾದ್ಯಂತ ಸಂಚಲನವನ್ನೇ ಸೃಷ್ಟಿ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮತ್ತೊಂದು ಮಹತ್ವದ ದಾಖಲೆ ದೊರೆತಿದ್ದು. ಇಡೀ ಪ್ರಕರಣಕ್ಕೆ ದೊಡ್ಡ ತಿರುವು ನೀಡಿದೆ.
ಪ್ರಕರಣ ದ ಮುಖ್ಯ ಆರೋಪಿ ಹಾಗೂ ಅತ್ಯಾಚಾರಕ್ಕೆ ಒಳಗಾಗಿರೋ ಯುವತಿಯ ಸಹೋದರನ ನಡುವೆ ಮೊದಲೇ ಸಂಪರ್ಕವಿತ್ತು ಎನ್ನಲಾಗಿದೆ. ಕಳೆದ ಐದು ತಿಂಗಳಲ್ಲಿ ಯುವತಿಯ ಸಹೋದರನ ಹೆಸರಿನಲ್ಲಿರೋ ಫೋನಿನಿಂದ ಆರೋಪಿ ಸಂದೀಪ್ ಸಿಂಗ್ ಫೋನ್ ಗೆ 62 ಔಟ್ ಗೋಯಿಂಗ್ ಕಾಲ್ ಹೋಗಿದೆ. ಹಾಗೇ ಆರೋಪಿಯಿಂದ 42 ಇನ್ಕಮಿಂಗ್ ಕಾಲ್ ಸೇರಿ, ಒಟ್ಟು 104 ಕರೆಗಳ ದಾಖಲೆ ಪತ್ತೆಯಾಗಿದೆ ಅಂತ
ವರದಿಯಾಗಿದೆ.
2019 ಅಕ್ಟೋಬರ್ 13ರಿಂದಲೇ ಇಬ್ಬರು ನಡುವೆ ಮಾತುಕತೆ ನಡೆದಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಈ ಕುರಿತು ಪೊಲೀಸರು ಸಂತ್ರಸ್ತೆಯ ಸಹೋದರನನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ ಎನ್ನಲಾಗಿದೆ.
- Advertisement -