Sunday, June 7, 2026
spot_imgspot_img
spot_imgspot_img

ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ಬಾರ್‌ನೊಳಗೆ ಯುವಕರ ನಡುವೆ ಗಲಾಟೆ, ಮಾರಣಾಂತಿಕ ಹಲ್ಲೆ..!

- Advertisement -
- Advertisement -

ಮಂಗಳೂರು: ಬಿಯರ್ ಬಾಟಲಿ, ಸೋಡಾ ಬಾಟಲಿಯಿಂದ ಯುವಕನೊಬ್ಬನಿಗೆ ಮೂವರ ಯುವಕರ ತಂಡ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಇಲ್ಲಿನ ಹೊರವಲಯದ ಕೊಟ್ಟಾರ ಬಳಿಯ ಕೋಸ್ಟಲ್ ಬಾರ್ ನಲ್ಲಿ ಘಟನೆ ರಾತ್ರಿ ನಡೆದಿದೆ. ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಅಶೋಕ್ ಪೂಜಾರಿ ಎಂಬಾತ ಬಿಯರ್ ಹಾಗೂ ಸೋಡಾ ಬಾಟಲಿಯಿಂದ ಹಲ್ಲೆಗೊಳಗಾದವ. ಇವರು ಬಾ‌ರ್‌ನ ಕೌಂಟರ್ ಬಳಿಯೇ ರಕ್ತ ಚಿಮ್ಮುವಂತೆ ಹೊಡೆದಾಡಿಕೊಂಡಿದ್ದಾರೆ. ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಶುರುವಾಗಿದ್ದು, ಮೊದಲು ಪರಸ್ಪರ ಮಾತಿನ ಚಕಮಕಿ ನಡೆದಿದ್ದು, ಬಳಿಕ ಹೋಯ ಕೈ ನಡೆದಿದೆ. ಈ ವೇಳೆ ಓರ್ವ ಯುವಕ ಅಶೋಕ್ ಪೂಜಾರಿ ಮೇಲೆ ಬಿಯರ್ ಬಾಟಲಿಯಿಂದ ತಲೆಗೆ ಭಾರಿಸಿದ್ದಾನೆ. ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿದವನನ್ನು ರೀತು ಎಂದು ಗುರುತಿಸಲಾಗಿದೆ.

ಬಿಯರ್ ಬಾಟಲಿ ಮತ್ತು ಸೋಡಾ ಬಾಟಲಿ ಚೂರಿನಿಂದ ತಲೆ, ಮುಖದ ಭಾಗಗಳಿಗೆ ತಿವಿದು ಕೊಲೆ ಯತ್ನ ನಡೆಸಿದ್ದಾರೆ. ತಲೆಗೆ, ಬೆನ್ನಿಗೆ ಮತ್ತು ಮುಖಕ್ಕೆ ಬಲವಾಗಿ ಹೊಡೆದು ರಕ್ತ ಚಿಮ್ಮುವಂತೆ ಹಲ್ಲೆ ನಡೆಸಲಾಗಿದೆ. ಗಾಯಾಳುವಿನ ತಲೆ, ಮುಖ, ಬೆನ್ನಿನ ಭಾಗಗಳಲ್ಲಿ ಹಾಗೂ ಮೂಗಿನ ಮೂಳೆ ಮುರಿತ ಒಳಗಾಗಿದೆ. ತೀವ್ರ ರಕ್ತಸ್ರಾವಕ್ಕೆ ಒಳಗಾದ ಅಶೋಕ್ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

Related news

error: Content is protected !!