Wednesday, August 12, 2026
spot_imgspot_img
spot_imgspot_img

ಟ್ರಕ್ಕಿಂಗ್ ಬಂದಿದ್ದ ಬೆಂಗಳೂರಿನ ಯುವಕ ನಾಪತ್ತೆ..!

- Advertisement -
- Advertisement -

ಟ್ರಕ್ಕಿಂಗ್ ಬಂದಿದ್ದ ಬೆಂಗಳೂರಿನ ಯುವಕನೊಬ್ಬ ರಾಣಿಝರಿ ಪಾಯಿಂಟ್‌ನಲ್ಲಿ ಬೈಕ್ ನಿಲ್ಲಿಸಿ ನಾಪತ್ತೆಯಾಗಿದ್ದಾನೆ. ನಾಪತ್ತೆಯಾದ ಯುವಕನನ್ನು ಭರತ್ ಎಂದು ಗುರುತಿಸಲಾಗಿದೆ.

ಭರತ್ ಬಿ.ಇ ಮುಗಿಸಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಕಂಪೆನಿ ಅವರನ್ನು 3 ತಿಂಗಳ ಸಂಬಳ ನೀಡಿ ಕೆಲಸದಿಂದ ತೆಗೆದು ಹಾಕಿದೆ. ಇದರಿಂದ ಭರತ್ ತನ್ನ ಬೈಕ್ ನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ ರಾಣಿಝರಿ ಪಾಯಿಂಟ್ ಬಂದಿದ್ದರು.

ಮಗನ ಬರುವಿಕೆಗೆ ಕಾದು ಕುಳಿತ ಪೋಷಕರು, ಮಗನನ್ನು ಹುಡುಕಿಕೊಂಡು ಚಿಕ್ಕಮಗಳೂರಿಗೆ ಬಂದಿದ್ದಾರೆ. ಇತ್ತ ರಾಣಿಝರಿ ಪಾಯಿಂಟ್ ನಲ್ಲಿ ಭರತ್ ತನ್ನ ಬೈಕ್ ನಿಲ್ಲಿಸಿದ್ದು, ಗುಡ್ಡದ ತುದಿಯಲ್ಲಿ ಟೀ ಶರ್ಟ್, ಮೊಬೈಲ್, ಸ್ಲಿಪರ್ ಪತ್ತೆಯಾಗಿದೆ. ಅನುಮಾನಗೊಂಡಿರುವ ಬಾಳೂರು ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿಯಿಂದ ಭರತ್ ಗಾಗಿ ಹುಡುಕಾಟ ಶುರು ಮಾಡಿದ್ದಾರೆ.

vtv vitla
- Advertisement -

Related news

error: Content is protected !!