Thursday, October 10, 2024
spot_imgspot_img
spot_imgspot_img

ಆರೋಗ್ಯ ವೃದ್ಧಿಗಾಗಿ ಸೇವಿಸಿ ಸಬ್ಜಾ ಬೀಜಗಳು..!

- Advertisement -
- Advertisement -

ಸಬ್ಜಾ ಬೀಜಗಳು ಅಥವಾ ಕಾಮಕಸ್ತೂರಿ ಎಂದು ಕರೆಯಲಾಗುವ ತುಳಸಿ ಬೀಜಗಳಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಇದನ್ನು ಆಯುರ್ವೇದ ಮತ್ತು ಪ್ರಾಚೀನ ಚೀನೀ ಔಷಧಿಗಳಲ್ಲಿ ಬಳಸಲಾಗುತ್ತದೆ. ತುಳಸಿ ಬೀಜಗಳು ಪೌಷ್ಟಿಕಾಂಶದಿಂದ ಕೂಡಿದ್ದು ಇದರಲ್ಲಿ ಹೆಚ್ಚಿನ ಪ್ರೋಟೀನ್, ಫೈಬರ್ ಮತ್ತು ಕಬ್ಬಿಣದ ಅಂಶವಿದೆ. ಜೀರ್ಣಕ್ರಿಯೆ, ತೂಕ ಇಳಿಸಲು, ಕೆಮ್ಮು, ಶೀತ ಅಥವಾ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮನೆ ಮದ್ದಾಗಿ ಇದನ್ನು ಹೆಚ್ಚಾಗಿ ಬಳಸಿಕೊಳ್ಳಲಾಗುತ್ತೆ. ಕೊರೊನಾ ಸಮಯದಲ್ಲಂತೂ ಇದು ಬಳಕೆ ಪ್ರಯೋಜನಕಾರಿಯಾಗಿದೆ.

ರೋಗನಿರೋಧಕ ಶಕ್ತಿ ಹೆಚ್ಚಳ

ತುಳಸಿ ಬೀಜಗಳಲ್ಲಿ ಫ್ಲೆವೊನೈಡ್​ ಮತ್ತು ಫೀನಾಲಿಕ್ ಎಂಬ ಅಂಶಗಳಿದೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಉಪಕಾರಿಯಾಗಿದೆ. ಜೊತೆಗೆ ಌಂಟಿ-ಆಕ್ಸಿಡೆಂಟ್​ಗಳು ತುಳಸಿ ಬೀಜದಲ್ಲಿ ಸಮೃದ್ಧವಾಗಿದ್ದು, ಇದು ದೇಹದಲ್ಲಿನ ಸ್ವತಂತ್ರ ರಾಡಿಕಲ್​ಗಳಿಂದ ಉಂಟಾಗುವ ಹಾನಿಯಿಂದ ರಕ್ಷಣೆ ಮಾಡುತ್ತೆ.

ಹೃದಯದ ಆರೋಗ್ಯಕ್ಕೆ ರಾಮ ಬಾಣ

ತುಳಸಿ ಬೀಜಗಳಿಂದ ದೇಹದಲ್ಲಿನ ಕೊಬ್ಬಿನಾಂಶದ ಮಟ್ಟವನ್ನು ಕಡಿಮೆ ಮಾಡಬಹುದು. ಆಯುರ್ವೇದದಲ್ಲಿ ಅಧಿಕ ರಕ್ತದೊತ್ತಡಕ್ಕೆ ಪರಿಹಾರವಾಗಿ ತುಳಿಸಿ ಬೀಜಗಳನ್ನು ಬಳಸಲಾಗುತ್ತದೆ. ಅಧಿಕ ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡ ಎರಡೂ ಹೃದಯದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಅಂಶಗಳು. ಆದರೆ ತುಳಸಿ ಬೀಜಗಳು ಹೆಚ್ಚಿನ ಲಿಪಿಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

ತೂಕ ಇಳಿಸಲು ಸಹಕಾರಿ

ತುಳಸಿ ಬೀಜಗಳು ನಾರಿನಿಂದ ತುಂಬಿರುತ್ತವೆ. ಹೆಚ್ಚಿನ ಮಟ್ಟದ ಒಮೆಗಾ -3 ಕೊಬ್ಬಿನಾಮ್ಲಗಳಿಂದ ಬರುವ ಆಲ್ಫಾ-ಲಿನೋಲೆನಿಕ್ ಆಮ್ಲದ ಉಪಸ್ಥಿತಿಯು ದೇಹದಲ್ಲಿ ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. ಹಾಗೂ ಉರಿಯೂತ ಕಡಿಮೆ ಮಾಡಲು ಸಹ ಉಪಯುಕ್ತವಾಗಿದೆ. ತುಳಸಿ ಬೀಜದ ಸೇವನೆಯಿಂದ ಎಡಿಮಾ ಮತ್ತು ಉರಿಯೂತಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ಕೂದಲ ಆರೈಕೆಗೆ ನೆರವು

ತುಳಸಿ ಬೀಜಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ಕೂದಲಿನ ಆರೈಕೆಗೆ ಸಹಕಾರಿಯಾಗಿದೆ. ಅಕಾಲಿಕ ಕೂದಲು ಉದುರುವಿಕೆಯನ್ನು ತಡೆಯುತ್ತದೆ. ನೆತ್ತಿಯ ಮೇಲಿನ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಆಮ್ಲಾ ಮತ್ತು ತುಳಸಿ ಪುಡಿಗಳನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ. ಇದಕ್ಕೆ ಸ್ವಲ್ಪ ಪ್ರಮಾಣದ ತೆಂಗಿನ ಎಣ್ಣೆಯನ್ನು ಬಳಸಿ ಪೇಸ್ಟ್ ಮಾಡಿ. ಮಿಶ್ರಣವನ್ನು ಕೂದಲಿಗೆ ಹಚ್ಚಿ. ಇದನ್ನು ನಿಯಮಿತವಾಗಿ ಅನ್ವಯಿಸುವುದರಿಂದ ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ.

ಮಾನಸಿಕ ಒತ್ತಡ ನಿವಾರಣೆಗೆ ಸಹಾಯಕ

ತುಳಸಿ ಬೀಜಗಳು ಮನಸ್ಸಿನ ಮೇಲೆ ಹಿತವಾದ ಮತ್ತು ಶಾಂತಿಯುತ ಪರಿಣಾಮ ಬೀರುತ್ತದೆ. ಈ ಮೂಲಕ ದೇಹದ ಒತ್ತಡವನ್ನ ಸಹ ಕಡಿಮೆ ಮಾಡಲು ಸಹಾಯ ಮಾಡುತ್ತೆ. ಮಾಸಿಕವಾಗಿ ದಣಿದಿದ್ದರೆ ಮತ್ತು ಮಾನಸಿಕ ಖಿನ್ನತೆಗೆ ಒಳಗಾಗಿದ್ದರೆ ತುಳಸಿ ಬೀಜಗಳನ್ನು ಸೇವಿಸುವುದರಿಂದ ಒತ್ತಡ ಕಡಿಮೆಯಾಗುತ್ತೆ. ತುಳಸಿ ಬೀಜಗಳು ನಿಮ್ಮ ಮನಸ್ಸಿಗೆ ಉತ್ತೇಜನ ನೀಡುತ್ತವೆ.

ಬಾಯಿಯ ಆರೋಗ್ಯವನ್ನು ಕಾಪಾಡಲು ಉತ್ತಮ

ಇನ್ನು ತುಳಸಿ ಬೀಜಗಳು ಉರಿಯೂತದ ಗುಣಗಳನ್ನು ಹೊಂದಿದ್ದು, ಬಾಯಿ ಹುಣ್ಣಿಗೆ ಮನೆ ಮದ್ದಾಗಿದೆ. ಇದರಲ್ಲಿ ಌಂಟಿಮೈಕ್ರೊಬಿಯಲ್, ಆಂಟಿವೈರಲ್, ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಗಳಿವೆ. ಬಾಯಿಯ ಆರೋಗ್ಯ ಕಾಪಾಡಲು ಹೆಚ್ಚಿನ ಸಹಾಯ ಮಾಡುತ್ತೆ. ಕೆಟ್ಟ ಉಸಿರಾಟ, ಪ್ಲಾಕ್​ ಮತ್ತು ಕುಳಿಗಳಿಗೆ ಚಿಕಿತ್ಸೆ ನೀಡಲು ಹಾಗೂ ತಾಜಾ ಶ್ವಾಸವನ್ನು ಪಡೆಯಲು ಸಹ ತುಳಸಿ ಬೀಜಗಳನ್ನು ಬಳಸಲಾಗುತ್ತೆ.

- Advertisement -

Related news

error: Content is protected !!