- Advertisement -
- Advertisement -
ಹೆಂಡತಿ ಅಕ್ರಮ ಸಂಬಂಧಕ್ಕೆ ಬೇಸತ್ತು ಗಂಡ ರೈಲ್ವೇ ಟ್ರ್ಯಾಕ್ಗೆ ತಲೆ ಕೊಟ್ಟು ಸೂಸೈಡ್ ಮಾಡಿಕೊಂಡ ಘಟನೆ ಸೋಲದೇವನಹಳ್ಳಿ ಬಳಿ ನಡೆದಿದೆ.
ಮೃತ ದುರ್ದೈವಿ ರಮೇಶ್ ಹಾಗೂ ಪತ್ನಿ ಶಿಲ್ಪಾ ಎಂದು ಗುರುತಿಸಲಾಗಿದೆ.
ಸಾಯುವ ಮುನ್ನ ರಮೇಶ್ ಡೆತ್ ನೋಟ್ ಬರೆದಿದ್ದಾರೆ. ಡೆತ್ ನೋಟ್ನಲ್ಲಿ ತನ್ನ ಸಾವಿಗೆ ಹೆಂಡತಿ ಶಿಲ್ಪಾ ಮತ್ತು ಆಕೆ ಬಾಯ್ ಫ್ರೆಂಡ್ ಸಂಜು ಎಂಬಾತ ಕಾರಣ ಎಂದು ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲ ಇಬ್ಬರ ಫೋಟೋ ಸ್ಟೇಟಸ್ ಹಾಕಿ ಸಾವನ್ನಪ್ಪಿದ್ದಾರೆ. ತನ್ನ ಸಾವಿಗೆ ಕಾರಣರಾದ ಇಬ್ಬರಿಗೂ ಶಿಕ್ಷೆ ನೀಡಿ ಎಂದು ಡೆತ್ ನೋಟ್ನಲ್ಲಿ ಬರೆಯಲಾಗಿದೆ. ಸದ್ಯ ಯಶವಂತಪುರ ರೈಲ್ವೇ ಪೊಲೀಸ್ ಠಾಣೆಯಲ್ಲಿ ಇಬ್ಬರ ಮೇಲೆ ಎಫ್ಐಆರ್ ದಾಖಲಾಗಿದೆ.
- Advertisement -