Tuesday, July 28, 2026
spot_imgspot_img
spot_imgspot_img

ಸಂಪತ್ ಕೊಲೆ ಪ್ರಕರಣ 5 ಆರೋಪಿಗಳ ಬಂಧನ!!

- Advertisement -
- Advertisement -

ಮಂಗಳೂರು: ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಅವರ ಕೊಲೆ ಆರೋಪಿ ಸಂಪತ್ ನನ್ನು ಕೋವಿಯಿಂದ ಗುಂಡು ಹಾಕಿ, ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿ ಪ್ರಮುಖ ಆರೋಪಿಗಳನ್ನು ಸುಳ್ಯ ಸರ್ಕಲ್ ಇನ್ಸ್ ಪೆಕ್ಟರ್ ನೇತೃತ್ವದ ಹಾಗೂ ಮಂಗಳೂರು ಡಿಸಿಐಬಿ ಪೊಲೀಸರ ತನಿಖಾ ತಂಡ ಬಂಧಿಸಿರುವ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

ಬಂಧಿತ ಆರೋಪಿಗಳನ್ನು ಕಲ್ಲುಗುಂಡಿಯ ನಿವಾಸಿ ಮನು, ಕಾರ್ತೀಕ್‌, ಮಧು, ಬಿಬಿನ್, ಶಿಶಿರ್ ಎಂದು ಗುರುತಿಸಲಾಗಿದೆ.ಹೊರ ಜಿಲ್ಲೆಯಲ್ಲಿ ಆರೋಪಿಗಳ ಜಾಡು ಹಿಡಿದು ಕರೆತರಲಾಗುತ್ತಿದೆ ಎಂದು ಮಾಹಿತಿ ಬಂದಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧನ ಮಾಡಿರುವ ಅಧಿಕೃತ ಮಾಹಿತಿಯನ್ನು ಪೊಲೀಸರು ಅಧಿಕೃತವಾಗಿ ಇನ್ನೂ ಮಾಹಿತಿ ನೀಡಿಲ್ಲ. ಪೊಲೀಸರು ಬಂಧನ ಮಾಡಿರುವ ಆ ಐದು ಪ್ರಮುಖ ಆರೋಪಿಗಳು ಕಲ್ಲುಗುಂಡಿ ಆಸುಪಾಸಿನ ನಿವಾಸಿಗಳು ಎಂದು‌ ತಿಳಿದು ಬಂದಿದೆ.

- Advertisement -

Related news

error: Content is protected !!