

ಉಡುಪಿ: ಅಶ್ವತ್ಥ ಎಲೆಯಲ್ಲಿ ಪ್ರಸಿದ್ಧ ವ್ಯಕ್ತಿಗಳ ಚಿತ್ರವನ್ನು ಮೂಡಿಸುವ ಉಡುಪಿಯ ಯುವ ಕಲಾವಿದ ಮಹೇಶ್ ಮರ್ಣೆ ರಚಿಸಿದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ಭಾವಚಿತ್ರಕ್ಕೆ ಸ್ವತಃ ಕ್ರಿಕೆಟ್ ದೇವರೆಂದೇ ಖ್ಯಾತರಾದ ಸಚಿನ್ ತೆಂಡೂಲ್ಕರ್ ಅವರು ಮೆಚ್ಚಿ ಅಭಿನಂದಿಸಿದ್ದಾರೆ.

ಉಡುಪಿಯ ಮರ್ಣೆ ಎಂಬ ಪುಟ್ಟ ಊರಿನ ಕಲಾವಿದರಾಗಿರುವ ಮಹೇಶ್ ಈಗಾಗಲೇ ಹಲವಾರು ಖ್ಯಾತ ವ್ಯಕ್ತಿಗಳ ಭಾವಚಿತ್ರಗಳನ್ನು ಅಶ್ವತ್ಥ ಎಲೆಯಲ್ಲಿ ಬಿಡಿಸುವ ಮೂಲಕ ಖ್ಯಾತರಾಗಿದ್ದಾರೆ. ಸುಮಾರು ಆರು ತಿಂಗಳ ಹಿಂದೆ ಮಹೇಶ್ ಅವರು ಸಚಿನ್ ತೆಂಡೂಲ್ಕರ್ ಅವರ ಭಾವಚಿತ್ರವನ್ನು ಅಶ್ವತ್ಥ ಎಲೆಯಲ್ಲಿ ಚಿತ್ರಿಸಿದ್ದರು. ಕೇವಲ ಏಳು ನಿಮಿಷಗಳಲ್ಲಿ ಈ ಚಿತ್ರವನ್ನು ಬಿಡಿಸಿ ಅತಿ ವೇಗವಾಗಿ ಭಾವಚಿತ್ರವನ್ನು ಬಿಡಿಸಿ ಎಕ್ಸ್‌ಕ್ಲೂಸಿವ್ ವರ್ಲ್ಡ್ ರೆಕಾರ್ಡ್ಸ್ ಸರ್ಟಿಫಿಕೇಟ್ ಅನ್ನು ಪಡೆದುಕೊಂಡಿದ್ದರು.

ಅಶ್ವತ್ಥ ಎಲೆಯಲ್ಲಿ ಬಿಡಿಸಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಭಾವಚಿತ್ರವನ್ನು ಮಹೇಶ್ ಮರ್ಣೆ ಸಚಿನ್ ಅವರಿಗೆ ಕಳುಹಿಸಿಕೊಟ್ಟಿದ್ದರು. ಮಹೇಶ್ ಅವರ ಕಲಾ ಚಾರ್ತುರ್ಯವನ್ನು ಮೆಚ್ಚಿ ಸ್ವತಃ ಸಚಿನ್ ತೆಂಡೂಲ್ಕರ್ ಅವರೇ ಪ್ರಶಂಸನಾ ಪತ್ರದ ಜೊತೆಗೆ ತಮ್ಮ ಅಚ್ಚುಮೆಚ್ಚಿನ ಎರಡು ಫೊಟೋಗಳನ್ನು ಮಹೇಶ್ ಅವರಿಗೆ ಕಳುಹಿಸಿಕೊಟ್ಟಿದ್ದಾರೆ.
“2021 ಮಾರ್ಚ್ ನಲ್ಲಿ ಅಶ್ವತ್ಥ ಎಲೆಯಲ್ಲಿ7 ನಿಮಿಷದಲ್ಲಿ ರಚಿಸಿದ್ದ ಸಚಿನ್ ತೆಂಡೂಲ್ಕರ್ ಅವರ ಭಾವಚಿತ್ರವು ಎಕ್ಸ್ ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಗೆ ಆಯ್ಕೆಯಾಗಿತ್ತು. ಸಚಿನ್ ತೆಂಡೂಲ್ಕರ್ ಅವರ ಇನ್ನೊಂದು ಭಾವಚಿತ್ರವನ್ನು ರಚಿಸಿ ಅವರ ವಿಳಾಸಕ್ಕೆ ಕಳುಹಿಸಿದ್ದೆ. ಇದೀಗ ಆರು ತಿಂಗಳ ಬಳಿಕ ಅವರ ಪ್ರತಿಕ್ರಿಯೆ ಬಂದಿದೆ. ತುಂಬಾ ಖುಷಿ ಯಾಗಿದೆ” ಎಂದು ಕಲಾವಿದ ಮಹೇಶ್ ಮರ್ಣೆ ಪ್ರತಿಕ್ರಿಯಿಸಿದ್ದಾರೆ.
- ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಸಿಜೆಪಿ ಬೃಹತ್ ಪ್ರತಿಭಟನೆ: ನಟ ಪ್ರಕಾಶ್ ರಾಜ್ ಬೆಂಬಲ
- ವಿಟ್ಲ: ಅನಾರೋಗ್ಯದಿಂದ ಯುವಕ ನಿಧನ
- ಮಹಜರಿಗೆ ಕರೆದೊಯ್ಯುವ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಆರೋಪಿಯ ಕಾಲಿಗೆ ಗುಂಡೇಟು
- ಮಂಜೇಶ್ವರ : ಹಾಸ್ಟೆಲ್ ನಿಂದ ಇಬ್ಬರು ಬಾಲಕಿಯರು ನಾಪತ್ತೆ
- ಮಂಜೇಶ್ವರ: ಇಬ್ಬರು ಬಾಲಕರು ನಾಪತ್ತೆ










