Monday, June 22, 2026
spot_imgspot_img
spot_imgspot_img

ಈಜಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತ್ಯು..!

- Advertisement -
- Advertisement -

ಈಜಲು ತೆರಳಿದ್ದ ಯುವಕ ಹೊಳೆಯ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬೈರಂಪಳ್ಳಿ ಗ್ರಾಮದ ಕೆ.ಸಿ.ರೋಡ್‌ನ ಪಟ್ಟಿಬಾವು ಹೊಳೆಯಲ್ಲಿ ನಡೆದಿದೆ.

ಮೃತಪಟ್ಟ ಯುವಕ ಎಲೆಕ್ಟ್ರೀಷಿಯನ್ ಕೆಲಸ ಮಾಡುತಿದ್ದ ಅಜಯ್ (21) ಎಂಧು ಗುರುತಿಸಲಾಗಿದೆ.

ಇವರು ವಾಲಿಬಾಲ್ ಆಡಲೆಂದು ಕೆ.ಸಿ.ರೋಡ್‌ಗೆ ತೆರಳಿದ್ದರು. ವಾಲಿಬಾಲ್ ಆಡಿದ ಬಳಿಕ ಸ್ನೇಹಿತರೆಲ್ಲರೂ ಹೊಳೆಯ ದಂಡೆಯಲ್ಲಿ ಕುಳಿತಿದ್ದು, ಅಜಯ್ ತಾನು ಈಜಿಕೊಂಡು ನದಿಯ ಇನ್ನೊಂದು ದಡಕ್ಕೆ ಹೋಗುವುದಾಗಿ ಹೇಳಿ ಹೊಳೆಗೆ ಇಳಿದಿದ್ದು, ಮಧ್ಯದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟರು. ಬಳಿಕ ಸ್ಥಳೀಯರೊಬ್ಬರು ಮೃತದೇಹವನ್ನು ಹೊರತೆಗಿದ್ದಾರೆ. ಈ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!