Sunday, June 21, 2026
spot_imgspot_img
spot_imgspot_img

ರೀಲ್ಸ್‌ ನೋಡಿ ಮದುವೆಯಾದ ಯುವಕ; ಗರ್ಭಿಣಿ ಪತ್ನಿ ವಾಪಸ್‌ ಬಾರದೇ ನಾಪತ್ತೆ…! 4ನೇ ಮದುವೆ ಸುದ್ದಿ ಕೇಳಿ ಶಾಕ್‌ ಆದ ಪತಿರಾಯ….

- Advertisement -
- Advertisement -

ಗರ್ಭಿಣಿ ಪತ್ನಿ ವಾಪಸ್‌ ಬಂದಿಲ್ಲ, ನಾಪತ್ತೆಯಾಗಿದ್ದಾಳೆ ಎಂದು ದಾವಣಗೆರೆ ಕೆಟಿಜೆ ನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದ ವ್ಯಕ್ತಿ ಆಕೆಯ 4ನೇ ಮದುವೆ ಸುದ್ದಿ ಕೇಳಿ ಶಾಕ್‌ ಆಗಿದ್ದಾನೆ.

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ನರಹಳ್ಳಿ ಗ್ರಾಮದ‌ ಯುವತಿಯೊಬ್ಬಳನ್ನು 2022ರಲ್ಲಿ ದಾವಣಗೆರೆ ವಾಸಿಯಾದ ಪ್ರಶಾಂತ್ ಮದುವೆಯಾಗಿದ್ದ. ಈ ಇಬ್ಬರು ಇನ್‌ ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದರು. ಪರಿಚಯ ಪ್ರೀತಿಗೆ ತಿರುಗಿ, ಹಿರಿಯರ ಸಮ್ಮುಖದಲ್ಲೇ ಮದುವೆಯಾಗಿ 3 ತಿಂಗಳು ಸಂಸಾರ ಮಾಡಿದ್ದರು.‌ ಅದಾದ ಬಳಿಕ 3 ತಿಂಗಳ ಹಿಂದೆ ತವರು ಮನೆಗೆ ಹೋಗಿ ನಂತರ ಗರ್ಭಿಣಿ ಅಂತಾ ಹೇಳಿದವಳು ವಾಪಸ್‌ ಬಂದಿಲ್ಲ ಎಂದು ದೂರು ನೀಡಿದ್ದಾನೆ.

ಈ ವೇಳೆ ಯುವತಿಯು ಬೇರೆ ಬೇರೆ ಹೆಸರನ್ನು ಇಟ್ಟುಕೊಂಡು ಮೂವರನ್ನು ಮದುವೆಯಾಗಿ ವಂಚಿಸಿದ ವಿಷಯ ತಿಳಿದು ಬಂದಿದೆ. ಅಷ್ಟೇ ಅಲ್ಲದೇ ಮೈಸೂರು ಹತ್ತಿರದ ಬೆಳಗೊಳ ಬಳಿ ಒಬ್ಬರ ಜೊತೆ ಮದುವೆಯಾಗಿದ್ದಳು. ನಂತರ ದಾವಣಗೆರೆ ಪ್ರಶಾಂತ್ ಹಾಗೂ ಬೆಂಗಳೂರು ರಘು ಎಂಬವರನ್ನು ಮದುವೆಯಾಗಿ ವಂಚಿಸಿದ್ದಾಳೆ. ಈಗ ಮತ್ತೆ ಮಂಡ್ಯದ ಇನ್ನೊಬ್ಬ ಯುವಕನನ್ನು ಪ್ರೀತಿಸುತ್ತಿದ್ದಾಳೆ. ಆತನನ್ನು ಮದುವೆಯಾಗಿದ್ದಾಳೆ ಎಂದು ಆರೋಪ ಕೇಳಿಬಂದಿದೆ.

ಘಟನೆಯ ಹಿನ್ನೆಲೆಯಲ್ಲಿ ಪ್ರಶಾಂತ್‌ ಮಾತನಾಡಿ, ಮದುವೆಯಾಗಿ ವಂಚಿಸುವುದನ್ನು ಕಾಯಕ‌ ಮಾಡಿಕೊಂಡಿರುವ ಮಹಿಳೆ ಇನ್‌ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಎಕ್ಸ್‌ಪರ್ಟ್‌ ಆಗಿ ಹುಡುಗರನ್ನು ಯಾಮಾರಿಸುವ ಕೆಲಸ ಮಾಡುತ್ತಿದ್ದಾಳೆ. ಈಕೆ ವಿರುದ್ಧ ಕ್ರಮ ಕೈಗೊಳ್ಳಿ ಎಂದು ದೂರು ನೀಡಲು ಮುಂದಾಗಿದ್ದಾನೆ.

- Advertisement -

Related news

error: Content is protected !!