Thursday, May 2, 2024
spot_imgspot_img
spot_imgspot_img

*ಹಿಂದೂ ಧರ್ಮ ಎಂಬುದೇ ಇಲ್ಲ : ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್. ಭಗವಾನ್*

- Advertisement -G L Acharya panikkar
- Advertisement -

ಮೈಸೂರು: ಹಿಂದೂ ಧರ್ಮವೆಂಬುದೇ ಇಲ್ಲ. ಪರ್ಷಿಯನ್ನ ದೇಶದ ಸಾಹಿತಿಯೊಬ್ಬರು ಸಿಂಧೂ ನದಿಯಲ್ಲಿದ್ದವರನ್ನು ಹಿಂದೂ ಎಂದು ಕರೆದರು. ಹಿಂದೂ ಎಂಬುದು ನಮ್ಮ ಧರ್ಮವಲ್ಲ. ವೇದ, ಪುರಾಣ, ಸಂಸ್ಕತದಲ್ಲಿ ಎಲ್ಲಿಯೂ ಹಿಂದೂ ಎಂಬ ಶಬ್ದದ ಬಳಕೆಯಾಗಿಲ್ಲ. ನಾವು ಹಿಂದೂ ಹೇಳುತ್ತಿರುವ ಧರ್ಮ ಸನಾತನ ಧರ್ಮ, ವೈದಿಕ ಬ್ರಾಹ್ಮಣರ ಧರ್ಮವಾಗಿದೆ. ಈ ಬಗ್ಗೆ ಎಲ್ಲಿಯಾದರೂ ಚರ್ಚೆಗೆ ಬರಲಿ ನಾನು ಸಿದ್ಧನಿದ್ದೇನೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಮನಸ್ಮತಿಯಲ್ಲಿ ಶೂದ್ರರು ಬ್ರಾಹ್ಮಣರ ಗುಲಾಮರು, ವೈಶ್ಯಯರ ಮಕ್ಕಳು ಎಂದು ಉಲ್ಲೇಖಿಸಲಾಗಿದೆ. ಇದನ್ನು ನೀವು ಒಪ್ಪಿಕೊಳ್ಳವಿರಾ? ಒಪ್ಪಿಕೊಂಡರೆ ಸ್ವಾಭಿಮಾನಕ್ಕೆ ಧಕ್ಕೆ ಆಗುವುದಿಲ್ಲವೇ. ಈ ಧರ್ಮವನ್ನು ಜನರು ತಿರಸ್ಕರಿಸಬೇಕು ಎಂದು ಹೇಳಿದರು.

ಶಿಕ್ಷಿತ, ಸಜ್ಜರನ್ನು ರಾಕ್ಷಸರನ್ನಾಗಿ ಚಿತ್ರಸಿ ತಪ್ಪಾಗಿ ವಾಖ್ಯಾನ ಮಾಡಿರುವ ಪರಿಣಾಮ ಮಹಿಷನ ಬಗ್ಗೆ ತಪ್ಪು ಕಲ್ಪನೆ ಮೂಡಿದೆ. ಮಹಿಷ ಬೌದ್ಧನ ಅನುಯಾಯಿ ಮಹಿಷ ರಾಕ್ಷಸರನ್ನಾಗಿದ್ದಾರೆ ಒಂದು ಊರಿಗ್ಯಾಕೇ ಅವನ ಹೆಸರನ್ನು ಇಡುತ್ತಿದ್ದರು? ಸ್ವಾಮಿ ವಿವೇಕಾನಂದರೇ ಬುದ್ಧನಿಗಿಂತ ಶ್ರೇಷ್ಠ ವ್ಯಕ್ತಿ ಯಾರು ಇಲ್ಲವೆಂದು ಹೇಳಿದ್ದಾರೆ. ಕುವೆಂಪು, ಪೆರಿಯಾರ್ ಮುಂತಾದ ನಾಯಕರು ಕೂಡ ನಾನು ಹಿಂದೂ ಅಲ್ಲ ಎಂದಿದ್ದಾರೆ ಎಂದು ಹೇಳಿದರು.

ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ ಮರೆತು ಹೋದ ಮೈಸೂರಿನ ಪ್ರಾಚೀನ ಅಸ್ಮಿತೆಯನ್ನು ಸ್ಮರಿಸುವ ದಿನ ‘ಮಹಿಷಾ ದಸರಾ-೨೦೨೦’ಅನ್ನು ಅ.೧೫ರಂದು ಕಾನೂನಿನ ಮೂಲಕವೇ ಮಾಡಿಯೇ ತಿರುತ್ತೇವೆ ಎಂದು ಮಹಿಷಾ ಆಚರಣೆಗಾಗಿ ಜಿಲ್ಲಾಧಿಕಾರಿಗಳಿಗೆ ಎರಡು ಬಾರಿ ಮನವಿ ನೀಡಲಾಗಿದೆ. ಜಿಲ್ಲಾಡಳಿತ ಅನುಮತಿಗೆ ಮಂಗಳವಾರದವರೆಗೂ ಕಾಯುತ್ತೇವೆ. ಇಲ್ಲವಾದರೇ ಕಾನೂನಿನ ಮೂಲಕವೇ ಕೋವಿಡ್-೧೯ ನಿಯಮಾನುಸರವಾಗಿ ಅ.೧೫ರಂದು ಬೆಳಿಗ್ಗೆ ೧೧ಕ್ಕೆ ಚಾಮುಂಡಿಬೆಟ್ಟದಲ್ಲಿರುವ ಮಹಿಷ ದಸರಾ ಆಚರಣಾ ಸಮಿತಿ, ಅಹಿಂದ ಪ್ರಗತಿಪರರ ಸಂಘಟನೆಗಳು, ಸಾಹಿತಿಗಳು, ಪ್ರಗತಿಪರ ಚಿಂತಕರೆಲ್ಲರೂ ಮಹಿಷಾನ ಪತ್ರಿಮೆಗೆ ಪುಷ್ಪಾರ್ಚನೆ ಮಾಡಿ ಸರಳವಾಗಿ ಮಹಿಷ ದಸರಾವನ್ನು ಆಚರಣೆ ಮಾಡಿಯೇ ತಿರುತ್ತೇವೆ ಎಂದು ತಿಳಿಸಿದರು.

ಕೋವಿಡ್-೧೯ ಹಿನ್ನೆಲೆಯಲ್ಲಿ ಈ ಬಾರಿ ಮಹಿಷನ ಅನುಯಾಯಿಗಳು ಮೈಸೂರಿಗೆ ಬರಬೇಡಿ, ಮಹಿಷಾ ದಸರಾವನ್ನು ನಿಮ್ಮ ಜಿಲ್ಲೆ, ಊರುಕೇರಿ, ನಗರ ಪಟ್ಟಣಗಳಲ್ಲಿ ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಫ್ಲೆಕ್ಸ್ ಪಕ್ಕದಲ್ಲಿ ಇಟ್ಟು ಮಹಿಷನ ಭಾವಚಿತ್ರವಿಟ್ಟು ಪುಷ್ಪಾರ್ಚನೆ ಮಹಿಷ ದಸರಾ ಆಚರಿಸಿ, ಮನೆಯಲ್ಲಿ ನಿಮ್ಮ ಪೂರ್ವಿಕರ ಫೋಟೋವನ್ನು ಅಥವಾ ಅವರು ಬಳಸುತ್ತಿದ್ದ ವಸ್ತುವನ್ನು ಇಟ್ಟು, ಅವರು ಇಷ್ಟಪಡುತ್ತಿದ್ದ ಆಹಾರವನ್ನು ಎಡೆ ಇಟ್ಟು ಪೂಜಿಸಿ ಗೌರವಿಸಿ ಎಂದು ಸಲಹೆ ನೀಡಿದರು.

- Advertisement -

Related news

error: Content is protected !!