Sunday, June 7, 2026
spot_imgspot_img
spot_imgspot_img

ಗಣೇಶ ವಿಸರ್ಜನೆಯ ವೇಳೆ ನೃತ್ಯ ಮಾಡುತ್ತಿದ್ದ ಯುವಕ ಹೃದಯಾಘಾತದಿಂದ ಮೃತ್ಯು

- Advertisement -
- Advertisement -

ಗಣೇಶ ವಿಸರ್ಜನೆಯ ಮರೆವಣಿಗೆಯಲ್ಲಿ ನೃತ್ಯ ಮಾಡುತ್ತಿದ್ದ ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ದಾವಣಗೆರೆಯ ಜಗಳೂರಿನಲ್ಲಿ ನಡೆದಿದೆ.

ಖಾಸಗಿ ಕಂಪನಿಯಲ್ಲಿ ಮೆಕ್ಯಾನಿಕಲ್‌ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದ ನಾಗರಾಜ್‌ ಪತ್ತಾರ್‌ (30) ಮೃತ ವ್ಯಕ್ತಿ. ಪಟ್ಟಣದ ಗಂಗಾಂಬಿಕಾ ಬಡಾವಣೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ಗೆಳೆಯರೊಂದಿಗೆ ನಾಗರಾಜ್‌ ಡಿಜೆ ಸಂಗೀತಕ್ಕೆ ನೃತ್ಯ ಮಾಡುತ್ತಿದ್ದ. ಈ ವೇಳೆ ನಾಗರಾಜ್‌ ಏಕಾಏಕಿ ಕುಸಿದು ಬಿದ್ದಿದ್ದಾನೆ.

ಕೂಡಲೇ ಅಲ್ಲಿದ್ದ ಗೆಳೆಯರು ನಾಗರಾಜ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದಾದ ಬಳಿಕ ಅಲ್ಲಿಂದ ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ನಾಗರಾಜ್‌ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

- Advertisement -

Related news

error: Content is protected !!