Saturday, June 28, 2025
spot_imgspot_img
spot_imgspot_img

ಕಾಂಗ್ರೆಸ್ ಮುಖಂಡ ಮಿಥುನ್ ರೈ ವಿರುದ್ಧ ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘ ದೂರು

- Advertisement -
- Advertisement -

ಮಂಗಳೂರು: ನಾಥ ಸಮುದಾಯದ ಪರಮೋಚ್ಛ ಗುರುಗಳಾದ ಪೂಜ್ಯ ಯೋಗಿ ಆದಿತ್ಯನಾಥರ ಬಗ್ಗೆ ಕಾಂಗ್ರೆಸ್ ಮುಖಂಡ ಮಿಥುನ್ ರೈ ಸಾರ್ವಜನಿಕವಾಗಿ ತುಚ್ಛ ಶಬ್ದಗಳಿಂದ ಯೋಗಿ ಆದಿತ್ಯನಾಥರ ಮಾಡಿರುವುದು ಕರ್ನಾಟಕದ ನಾಥ ಸಂಪ್ರದಾಯಸ್ಥ ಸಮಸ್ತ ಯೋಗಿ ಸಮಾಜಕ್ಕೆ ಆಘಾತವನ್ನುಂಟು ಮಾಡಿದೆ ಎಂದು ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘ ಹೇಳಿದೆ.

ಮಿಥುನ್ ರೈ ಸಾರ್ವಜನಿಕವಾಗಿ ಯೋಗಿ ಆದಿತ್ಯನಾಥರ ಕ್ಷಮೆ ಯಾಚಿಸಬೇಕು ಎಂದು ಸಮಸ್ತ ಜೋಗಿ ಸಮಾಜ ಆಗ್ರಹಿಸಿದೆ.ಕದ್ರಿ ಕ್ಷೇತ್ರದಲ್ಲಿರುವ ಶ್ರೀ ಯೋಗೇಶ್ವರ ಮಠ ದಕ್ಷಿಣ ಭಾರತದ ಅತ್ಯಂತ ಪ್ರಮುಖ ನಾಥಪಂಥ ಕೇಂದ್ರವಾಗಿದ್ದು. ಇಲ್ಲಿನ ಪೀಠಾಧಿಪತಿಗಳ ಪಟ್ಟಾಭಿಷೇಕ ಪ್ರತಿ 12 ವರ್ಷಕ್ಕೊಮ್ಮೆ ಜರಗುತ್ತದೆ.

ಭಾರತದ ಎಲ್ಲ ನಾಥ ಪಂಥ ಮಠ/ ದೇವಸ್ಥಾನಗಳ ಮೇಲ್ವಿಚಾರಣೆ ಅಖಿಲ ಭಾರತ ವರ್ಷಿಯ ಅವಧೂತ ಬೇಪ್ ಬಾರಹ ಪಂಥಕ್ಕೆ ಒಳಪಟ್ಟಿದೆ. ಯೋಗಿ ಆದಿತ್ಯನಾಥರು ಈ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ಮತ್ತು ಎಲ್ಲ ನಾಥಪಂಥ ಮಠ ಮಂದಿರಗಳ ಪೀಠಾಧಿಪತಿಗಳ ಆಯ್ಕೆ ಅವರ ನೇತೃತ್ವದಲ್ಲಿ ಜರಗುತ್ತದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯೊಂದಿಗೆ ಯೋಗಿ ಆದಿತ್ಯನಾಥರ ಅವಿನಾಭಾವ ಸಂಬಂಧ ಹೊಂದಿರುತ್ತಾರೆ.

ಸಮಸ್ತ ಜೋಗಿ ಸಮಾಜಕ್ಕೆ ಪರಮೋಚ್ಛ ಗುರುಗಳೂ, ಮಾರ್ಗದರ್ಶಕರು ಆದ ಯೋಗಿ ಆದಿತ್ಯನಾಥರ ಅವಹೇಳನವನ್ನ ಕರ್ನಾಟಕದಲ್ಲಿರುವ ಇಪ್ಪತ್ತು ಲಕ್ಷ ಜೋಗಿ ಸಮಾಜ ಬಾಂಧವರು ಅತ್ಯುಗ್ರವಾಗಿ ಖಂಡಿಸಿದ್ದಾರೆ.
ಮಿಥುನ್ ರೈ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘ ಕದ್ರಿ ಪೊಲೀಸ್ ಠಾಣಾಧಿಕಾರಿಗಳಿಗೆ ಈಗಾಗಲೇ ದೂರು ಸಲ್ಲಿಸಿದೆ.

- Advertisement -

Related news

error: Content is protected !!