Thursday, May 9, 2024
spot_imgspot_img
spot_imgspot_img

ಪಾಣೆಮಂಗಳೂರು: (ಜ: 27 – 28) ಶ್ರೀ ವಿಠಲ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ

- Advertisement -G L Acharya panikkar
- Advertisement -

ಪಾಣೆಮಂಗಳೂರು: ಶ್ರೀ ವಿಠಲ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪಾಣೆಮಂಗಳೂರು ಇಲ್ಲಿ ಶಾಲಾ ಶತಮಾನೋತ್ಸವ ಸಂಭ್ರಮವು ಜ: 27 ಮತ್ತು 28 ರಂದು ನಡಯಲಿದೆ.

ದಿನಾಂಕ 27-1-2024 ನೇ ಶನಿವಾರ ಪೂರ್ವಾಹ್ನ 9:00 ಕ್ಕೆ ಪಾಣೆಮಂಗಳೂರು, ಎಸ್.ವಿ.ಎಸ್. ಅನುದಾನಿತ ವಿದ್ಯಾ ಸಂಸ್ಥೆ ಸಂಚಾಲಕ ಐ. ಯೋಗೀಶ್ ಪೈ ಧ್ವಜಾರೋಹಣ ಮೂಲಕ ಶತಮಾನೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಪೂರ್ವಾಹ್ನ 9:30 ಕ್ಕೆ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟನೆ , ಗುರುವಂದನೆ ಮತ್ತು ಸಭಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವ ಕೊಂಕಣಿ ಕೇಂದ್ರ ಅಧ್ಯಕ್ಷ CA ನಂದಗೋಪಾಲ ಶೆಣೈ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ದೀಪ ಪ್ರಜ್ವಲಿಸಲಿದ್ದಾರೆ. ಆಕಾಶವಾಣಿ ಮಂಗಳೂರು ನಿವೃತ್ತ ಮುಖ್ಯ ಉದ್ಛೋಷಕಿ ಶಕುಂತಳಾ ಆರ್‍. ಕಿಣಿ ಪ್ರಧಾನ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಎಸ್.ವಿ.ಎಸ್. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ನಿವೃತ್ತ ಮುಖ್ಯ ಶಿಕ್ಷಕ ಎನ್. ಕೃಷ್ಣರಾಜ ಶೆಟ್ಟಿ ಗೌರವ ಉಪಸ್ಥಿತಿ ವಹಿಸಲಿದ್ದಾರೆ.

ಪೂರ್ವಾಹ್ನ 11:30 ಕ್ಕೆ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪಾಣೆಮಂಗಳೂರು ಎಸ್.ವಿ.ಎಸ್. ವಿದ್ಯಾ ಸಂಸ್ಥೆ ನಿಕಟಪೂರ್ವ ಸಂಚಾಲಕ ಪಿ. ವೆಂಕಟ್ರಾಯ ಶೆಣೈ ಅಧ್ಯಕ್ಷತೆ ವಹಿಸಲಿದ್ದಾರೆ. ಬಂಟ್ವಾಳ ಎಸ್.ವಿ.ಎಸ್. ಕಾಲೇಜು ನಿವೃತ್ತ ಪ್ರಾಧ್ಯಾಪಕರು, ಭೌತಶಾಸ್ತ್ರ ವಿಭಾಗ ವೃಷಭರಾಜ್ ಜೈನ್ ವಿಶೇಷ ಉಪನ್ಯಾಸ ವಹಿಸಲಿದ್ದಾರೆ. ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಎಂ. ಜಿ, ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ಆಡಳಿತ ನಿರ್ದೇಶಕರು ಕೆ. ಕೃಷ್ಣ ಕುಮಾರ್‍ ಪೂಂಜಾ ಗಣ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ ವಿದ್ಯಾಭಿಮಾನಿಗಳೊಂದಿಗೆ ಸಹಬೋಜನ ನಡೆದು ಬಳಿಕ ಅಪರಾಹ್ನ 2:30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಶಾಲಾ ಮಕ್ಕಳಿಂದ ಯಕ್ಷಗಾನ ವೈಭವ: “ವೀರ ಅಭಿಮನ್ಯು”, ಶಾಲಾ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು ನಡೆಯಲಿದೆ.

ದಿನಾಂಕ: 28-1-2024 ನೇ ಆದಿತ್ಯವಾರ ಪೂರ್ವಾಹ್ನ 9:30 ಕ್ಕೆ ಶಾಲಾ ಹಿರಿಯ ವಿದ್ಯಾರ್ಥಿಗಳಿಂದ ಮತ್ತು ಪೋಷಕರಿಂದ ಪ್ರತಿಭಾ ವೈವಿಧ್ಯ ನಡೆಯಲಿದೆ. ಮಧ್ಯಾಹ್ನ 1:00 ಕ್ಕೆ ವಿದ್ಯಾಭಿಮಾನಿಗಳೊಂದಿಗೆ ಸಹಬೋಜನ ನಡೆದು ಬಳಿಕ ಅಪರಾಹ್ನ3:00 ರಿಂದ ಶತಮಾನೋತ್ಸವ ಸಮಾರೋಪ ಸಮಾರಂಭ , ಹಿರಿಯ ಸಾಧಕ ವಿದ್ಯಾರ್ಥಿಗಳಗೆ ಪುರಸ್ಕಾರ, ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಅಧ್ಯಕ್ಷ ಕೆ. ಪ್ರಭಾಕರ್‍ ಭಟ್ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ಎಕ್ಸ್‌ಫರ್ಟ್ ಸಮೂಹ ಸಂಸ್ಥೆ ಆಡಳಿತ ನಿರ್ದೇಶಕ ನರೇಂದ್ರ ಎಲ್. ನಾಯಕ್ , ಮಂಗಳೂರು ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್‌ ಕಲ್ಕೂರ ಪ್ರಧಾನ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ 5:30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಬಳಿಕ ರಾತ್ರಿ 8:00 ರಿಂದ ಸಹಬೋಜನ ನಡೆಯಲಿದೆ ಎಂದು ಶಾಲಾ ಆಡಳಿತ ಮಂಡಳಿಯ ಸರ್ವಸದಸ್ಯರು, ಸಹ ಅಧ್ಯಾಪಕರು, ವಿದ್ಯಾರ್ಥಿ ವೃಂದ ಮಕ್ಕಳ ಪೋಷಕರು ಮತ್ತು ಹಿರಿಯ ವಿದ್ಯಾರ್ಥಿಗಳ ಸಮೂಹ ಪ್ರಕಟನೆಯಲ್ಲಿ ತಿಳಿಸಲಾಗಿದೆ.

- Advertisement -

Related news

error: Content is protected !!